10/08/2026
ನಾಳೆ ಚಿತ್ರದುರ್ಗದಲ್ಲಿ...
ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಇಷ್ಟು ಸುದೀರ್ಘವಾಗಿ ಮತ್ತು ಸಕ್ರಿಯವಾಗಿ ಕೆಲಸ ಮಾಡಿದ ಇನ್ನೊಂದು ಪ್ರಾದೇಶಿಕ ಪಕ್ಷವಿಲ್ಲ. ಯಾವುದೇ ಹಣ/ಜಾತಿ/ರಾಜಕೀಯ ಬಲದ ಹಿನ್ನೆಲೆ ಇಲ್ಲದೆ ಇಂದು ಲಕ್ಷಾಂತರ ಜನರಿಗೆ ಧೈರ್ಯ ಮತ್ತು ಸ್ಫೂರ್ತಿಯನ್ನು ನೀಡಿದ ಚಳವಳಿ ಇದು.
ಕಳೆದ ಏಳು ವರ್ಷಗಳಲ್ಲಿ ನಾವು ಅಂದುಕೊಂಡಿದ್ದೆಲ್ಲಾ ಸಾಧಿಸದೇ ಇರಬಹುದು. ಆದರೆ ಇಂದಿನ ಹಣ/ಜಾತಿ/ಕೋಮು/ಭ್ರಷ್ಟಾಚಾರ ಮುಂತಾದ ಕಲ್ಮಶಗಳಿಂದ ಕಲುಷಿತವಾಗಿರುವ ಅಧಿಕಾರಕೇಂದ್ರಿತ ರಾಜಕಾರಣದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಮಾಡಿರುವ ಸಾಧನೆ ಕಡಿಮೆಯಲ್ಲ. ಮೌಲ್ಯಾಧಾರಿತ ಮತ್ತು ಆದರ್ಶವಾದಿ ರಾಜಕಾರಣ ಮಾಡುವುದು ಅಸಾಧ್ಯ ಮತ್ತು ನಗೆಪಾಟಲು ಎನ್ನುವ ವರ್ತಮಾನ ಸಮಾಜದಲ್ಲಿ ಪ್ರವಾಹದ ವಿರುದ್ಧ ಈಜಿ ಉಳಿಯುವುದು ಸಾಮಾನ್ಯ ಸಂಗತಿಯಲ್ಲ. ಆದರೆ ಮುಂದೆಯೂ ಕಾಲ ನಮಗೆ ಹೀಗೆಯೇ ಪ್ರತಿಕೂಲವಾಗಿರುವುದಿಲ್ಲ. ಗಾಳಿ ಬೀಸುವ ದಿಕ್ಕು ಬದಲಾದಂತೆ ಹಡಗಿನ ವೇಗವೂ ಬದಲಾಗುತ್ತದೆ.
ದೇಶದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗುತ್ತಿದೆ. ರಾಜ್ಯದಲ್ಲಿಯ ದುರಾಡಳಿತ ಮತ್ತು ಪರಮಭ್ರಷ್ಟ ರಾಜಕಾರಣವೂ ಜನರಲ್ಲಿ ಹೇಸಿಗೆ ಹುಟ್ಟಿಸುತ್ತಿದೆ. ಪರ್ಯಾಯದ ಬಗ್ಗೆ ಜನ ಈಗ ಗಂಭೀರವಾಗಿ ಯೋಚಿಸಲು ಆರಂಭಿಸಿದ್ದಾರೆ. ಅದರಲ್ಲಿಯೂ KRS ಪಕ್ಷದ ಬಗೆಗಿನ ಅಭಿಮಾನ ಮತ್ತು ಬೆಂಬಲ ದಿನೇದಿನೇ ಹೆಚ್ಚುತ್ತಿದೆ. ನಾನು ಮತ್ತು ನಾವು ಅದನ್ನು ಕಾಣುತ್ತಿರುವುದು ಮಾತ್ರವಲ್ಲ, ನಮ್ಮ ಅನುಭವಕ್ಕೂ ಅದು ಬರುತ್ತಿದೆ.
ಈ ಸಂದರ್ಭದಲ್ಲಿ...
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
KRS ಪಕ್ಷದ ಎಲ್ಲಾ ಸೈನಿಕರಿಗೆ, ಬೆಂಬಲಿಗರಿಗೆ, ಹಿತೈಷಿಗಳಿಗೆ ನಾಳೆಯ ಕಾರ್ಯಕ್ರಮಕ್ಕೆ ಕೋಟೆಯನಾಡಿಗೆ ಸ್ವಾಗತ.
ರವಿ ಕೃಷ್ಣಾರೆಡ್ಡಿ
ಗೌರವ ಅಧ್ಯಕ್ಷರು ,ಕೆಆರ್‌ಎಸ್ ಪಕ್ಷ
09-08-2026.