SFI Bengaluru

SFI Bengaluru ಎಸ್. ಎಫ್. ಐ ಬೆಂಗಳೂರು ಜಿಲ್ಲಾ ಸಮಿತಿಯ ಅಧಿಕೃತ ಪುಟ
Official page of SFI Bengaluru District Committee

18/10/2025

Justice for Engineering Students

ಬೆಂಗಳೂರು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಕಾಂ.  ಸೀತಾರಾಂ ಯೆಚೂರಿ ಅವರನ್ನು ಸ್ಮರಿಸಲಾಯಿತು.
12/09/2025

ಬೆಂಗಳೂರು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಕಾಂ. ಸೀತಾರಾಂ ಯೆಚೂರಿ ಅವರನ್ನು ಸ್ಮರಿಸಲಾಯಿತು.

📢 Important Announcement for Comrades 📢Demanding strict punishment for those who commit sexual harassment and violence a...
21/07/2025

📢 Important Announcement for Comrades 📢

Demanding strict punishment for those who commit sexual harassment and violence against girl students, a massive student protest is being organized under the leadership of the Students' Federation of India (SFI).

✊ "Mass Student Protest" ✊
🗓️ Date: 23-07-2025, Wednesday
🕚 Time: 11:00 AM

Let’s unite and raise our voices against harassment and injustice.
We will not stay silent until justice is served!

Students' Federation of India (SFI)
Bangalore District Committee


ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸೆಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ "ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ"

ದಿನಾಂಕ: 23-07-2025 ಬುಧವಾರ ಸಮಯ: 11:00 ಗಂಟೆಗೆ

ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ)
ಬೆಂಗಳೂರು ಜಿಲ್ಲಾ ಸಮಿತಿ

Join SFI and Become a complete student ,Learn to live , Learn to Lead ..Know the history and create a great history Once...
14/07/2025

Join SFI and Become a complete student ,
Learn to live , Learn to Lead ..
Know the history and create a great history
Once SFI is always a SFI
SFI Karnataka SFI - Students' Federation of India Sfi Bellary Sfi Shanthinagar

  the Draft University Grants Commission 2025
09/01/2025

the Draft University Grants Commission 2025

ಭಾರತ ವಿದ್ಯಾರ್ಥಿ ಫೆಡರೇಷನ್(SFI)ಕರ್ನಾಟಕ ರಾಜ್ಯ ಸಮಿತಿಪತ್ರಿಕಾ ಪ್ರಕಟಣೆ ದಿನಾಂಕ : 19-12-2024ಡಾ. ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಕೇಂದ...
20/12/2024

ಭಾರತ ವಿದ್ಯಾರ್ಥಿ ಫೆಡರೇಷನ್(SFI)
ಕರ್ನಾಟಕ ರಾಜ್ಯ ಸಮಿತಿ
ಪತ್ರಿಕಾ ಪ್ರಕಟಣೆ
ದಿನಾಂಕ : 19-12-2024

ಡಾ. ಬಿ ಆರ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮತ್ತು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ.

ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ತೆಗೆದುಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ ಎಂದು ಟೀಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವರ ಹೆಸರನ್ನು ಪದೇ ಪದೇ ಹೇಳಿದ್ದರೆ 7 ಪಟ್ಟು ಸ್ವರ್ಗ ಗ್ಯಾರಂಟಿ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯು ಆರೆಸ್ಸೆಸ್-ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ, ಬಿಜೆಪಿ ಸರ್ಕಾರ ನಿರಂತರವಾಗಿ ದಲಿತ,ಹಿಂದುಳಿದ, ಅಲ್ಪ ಸಂಖ್ಯಾತ ಸಮುದಾಯಗಳ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಬಹಿರಂಗವಾಗಿ ದಲಿತ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. SC/ST ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ನಿಗದಿಪಡಿಸಲಾದ ಮೊತ್ತವು ಕ್ಯಾಬಿನೆಟ್ ಮೀಸಲಿಟ್ಟ ಅರ್ಧಕ್ಕಿಂತ ಕಡಿಮೆ ಮೊತ್ತ ನೀಡಿದೆ. ಇನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಶೇ.0.1ರಷ್ಟು ಹಣವನ್ನು ಮಾತ್ರ ವಿತರಿಸಲಾಗಿದೆ. ಇದಲ್ಲದೆ ನಿರಂತರ ಶುಲ್ಕ ಹೆಚ್ಚಳವು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಇನ್ನಷ್ಟು ದುಬಾರಿಯಾಗಿಸಿದೆ. ಇದರಿಂದ ತಳ ಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರವೇಶಿಸಲಾಗುತ್ತಿಲ್ಲ.
ಆರ್‌ಎಸ್‌ಎಸ್-ಬಿಜೆಪಿ ಸರ್ಕಾರ, ಸಾವರ್ಜನಿಕ ವಿಶ್ವವಿದ್ಯಾನಿಲಯಗಳನ್ನು ಧಮನ ಮಾಡುತ್ತಿದೆ. ಐಐಟಿಗಳಂತಹ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶೇ.56ಪ್ರತಿಶತದಷ್ಟು ಆತ್ಮಹತ್ಯೆಗಳು ಹೆಚ್ಚಿವೆ. ಇವರೆಲ್ಲ ಅಂಚಿನಲ್ಲಿರುವ ಜಾತಿಗಳು, ತಳ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಇವರ ಕ್ರೂರ ನಡೆಯಿಂದ ರೋಹಿತ್ ವೇಮುಲನ ಸಾಂಸ್ಥಿಕ ಹತ್ಯೆಯಲ್ಲಿ ಬಿಜೆಪಿ ಸರ್ಕಾರದ ಸಂಪೂರ್ಣ ಕೈವಾಡ ಇದೆ ಎಂದು ದೇಶದ ಜನ ಗಮನಿಸಿದ್ದಾರೆ.
ಡಾ ಬಿ ಆರ್ ಅಂಬೇಡ್ಕರ್ ಅವರ ಪರಂಪರೆಯನ್ನು ಹಾಳುಮಾಡಲು ಮತ್ತು ಅನಿಷ್ಟ ಜಾತೀಯತೆಯನ್ನು ಮುಂದಿಡಲು ಮಾತ್ರ ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವ ಬಿಜೆಪಿ ವಿರುದ್ಧ, SFI ಕಾಲೇಜು ಕ್ಯಾಂಪಸ್‌ಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ರೂಪಿಸುತ್ತಿದೆ. ಅಂಬೇಡ್ಕರ್ ಅವರ ಅಪ್ರತಿಮ ಪರಂಪರೆಯನ್ನು ಕಾಪಾಡುವಲ್ಲಿ ನಾವು ದೃಢಸಂಕಲ್ಪ ಹೊಂದಿದ್ದೇವೆ. ಮತ್ತು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಆಶಯಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಮಟ್ಟದಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್, ಕರ್ನಾಟಕ ರಾಜ್ಯ ಸಮಿತಿ ( SFI) ಒತ್ತಾಯ ಮಾಡುತ್ತದೆ.

ಅಧ್ಯಕ್ಷರು / ಕಾರ್ಯದರ್ಶಿ
ಭಾರತ ವಿದ್ಯಾರ್ಥಿ ಫೆಡರೇಷನ್
ಕರ್ನಾಟಕ ರಾಜ್ಯ ಸಮಿತಿ.

Address

#20, Jyothi Basu Bhavana, WAT Street
Bangalore
560004

Alerts

Be the first to know and let us send you an email when SFI Bengaluru posts news and promotions. Your email address will not be used for any other purpose, and you can unsubscribe at any time.

Contact The University

Send a message to SFI Bengaluru:

Share