26/05/2026
llಜೈ ಶ್ರೀ ಗುರುದೇವ್ll
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿರವರ ಕೃಪಾಶೀರ್ವಾದದೊಂದಿಗೆ,
ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿರವರ ದಿವ್ಯಾಶೀರ್ವಾದಗಳೊಂದಿಗೆ,
ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ಪಿಯು ಕಾಲೇಜು ಮಹಾಲಕ್ಷ್ಮಿಪುರಂ ಬೆಂಗಳೂರು-86
ದಿನಾಂಕ 26-05-2026 ರಂದು 2025-26ನೇ ಸಾಲಿನ ಪ್ರಥಮ ಪಿಯುಸಿ ಮಕ್ಕಳಿಗೆ ಸ್ವಸ್ತಿ-2026 ಕಾರ್ಯಕ್ರಮವನ್ನು ಬಿಜಿಎಸ್ ಕ್ಯಾಂಪಸ್ ಮಹಾಲಕ್ಷ್ಮಿ ಪುರಂನಲ್ಲಿ ಇರುವ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಜಿರವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅಥಿತಿಗಳಾಗಿ ಪೂಜ್ಯ ಶ್ರೀ ಶ್ರೀ ಗುಣನಾಥ ಸ್ವಾಮಿಜಿರವರು ಕಾರ್ಯದರ್ಶಿಗಳು ಶೃಂಗೇರಿ ಶಾಖಾ ಮಠ, ಶ್ರೀ ಗೋಪಾಲಯ್ಯ ಮಾನ್ಯ ಶಾಸಕರು ಮಹಾಲಕ್ಷ್ಮೀಪುರಂ ವಿಧಾನಸಭಾ ಕ್ಷೇತ್ರ,ಶ್ರೀಮತಿ ವಿ ರಶ್ಮಿ ಮಹೇಶ್ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಇಲಾಖೆ, ಡಾ. ಎನ್ ಶಿವರಾಮ್ ರೆಡ್ಡಿ ಸಿಇಒ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್,ಡಾ. ಎನ್ ಮಧುಸೂಧನ್ ಡೀನ್ ಬಿಜಿಎಸ್ ಪಿಯು ಕಾಲೇಜುಗಳು ಚಿಕ್ಕಬಳ್ಳಾಪುರ ವಿಭಾಗ,ಪ್ರಾಂಶುಪಾಲರು ಪ್ರಥಮ ಪಿಯುಸಿ ಮಕ್ಕಳ ಪೋಷಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು