BGS PU College Nagarur

BGS PU College Nagarur BGS intends to provide the best of education to students of rural background & aims at bringing the

II ಜೈ ಶ್ರೀ ಗುರುದೇವ್ IIಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ, ಪರಮಪೂಜ್ಯ ಜಗದ್...
26/05/2026

II ಜೈ ಶ್ರೀ ಗುರುದೇವ್ II
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಾಶೀರ್ವಾದಗಳೊಂದಿಗೆ, ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿರವರ ಆಶೀರ್ವಾದಗಳೊಂದಿಗೆ
ಬಿಜಿಎಸ್ ವಿಜ್ಞಾತಂ ಸೌತ್ ಕ್ಯಾಂಪಸ್, ಬಿಜಿಎಸ್ ಪಿಯು ಕಾಲೇಜು ನಗರೂರು, ಬೆಂಗಳೂರು ಉತ್ತರ ತಾಲ್ಲೂಕು. ದಿನಾಂಕ 26-05-2026 ರಂದು 2025-26 ನೇ ಸಾಲಿನ ಪ್ರಥಮ ಪಿಯುಸಿ ಮಕ್ಕಳಿಗೆ ಸ್ವಸ್ತಿ -2026 ಕಾರ್ಯಕ್ರಮವನ್ನು ನಗರೂರಿನ ಬಿಜಿಎಸ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ.ಎನ್. ಶಿವರಾಮ್ ರೆಡ್ಡಿ ಸಿಇಒ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ , ಡಾ.ಎನ್. ಮಧುಸೂದನ್, ಡೀನ್ ಬಿಜಿಎಸ್ ಪಿಯು ಕಾಲೇಜುಗಳು ಚಿಕ್ಕಬಳ್ಳಾಪುರ ಇವರುಗಳು ಭಾಗವಹಿಸಿದ್ದರು. ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಜೀವನದ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಿದರು. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಾಂತಕುಮಾರ್, ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

21/05/2026
II ಜೈ ಶ್ರೀ ಗುರುದೇವ್ IIಬಿಜಿಎಸ್ ವಿಜ್ಞಾತಂ ಸೌತ್ ಕ್ಯಾಂಪಸ್ ಬಿಜಿಎಸ್ ಪಿಯು ಕಾಲೇಜು ನಗರೂರಿನಲ್ಲಿ ಇಂದು "ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ...
18/05/2026

II ಜೈ ಶ್ರೀ ಗುರುದೇವ್ II
ಬಿಜಿಎಸ್ ವಿಜ್ಞಾತಂ ಸೌತ್ ಕ್ಯಾಂಪಸ್ ಬಿಜಿಎಸ್ ಪಿಯು ಕಾಲೇಜು ನಗರೂರಿನಲ್ಲಿ ಇಂದು "ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ"ಯ ಅಂಗವಾಗಿ - "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮವನ್ನು - ಕರ್ನಾಟಕ ಇತಿಹಾಸ ಅಕಾದೆಮಿ, ಬೆಂಗಳೂರು ಹಾಗೂ ಬಿಜಿಎಸ್ ಪಿಯು ಕಾಲೇಜು ನಗರೂರು ಇವರ ಸಹಯೋಗದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಐತಿಹಾಸಿಕ ಶಾಸನಗಳು, ಸ್ಮಾರಕಗಳನ್ನು ರಕ್ಷಿಸುವ ಕುರಿತು ಹಾಗೂ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸನ ತಜ್ಞರಾದ ಕೆ. ಧನಪಾಲ್ ರವರು ವಿಶೇಷ ಉಪನ್ಯಾಸವನ್ನು ನೀಡಿ, ತಾವು ಸಂರಕ್ಷಿಸಿ, ಗುರುತಿಸಿದ ಹಲವು ಸ್ಥಳಗಳ ಮಹತ್ವವನ್ನು, ಹಲವು ರಾಜಮನೆತನಗಳ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ, ಅವುಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಇತ್ತೀಚೆಗೆ ಬಿಜಿಎಸ್ ಪಿಯು ಕಾಲೇಜು ಸಮೀಪದ ನಗರೂರಿನ ಒಂದು ಶಾಸನವನ್ನು ಪತ್ತೆ ಹಚ್ಚಿ, ಅದೊಂದು ತುರುಗೋಳ್ ಶಾಸನವೆಂದು, ಗಂಗರ ಕಾಲಘಟ್ಟದ್ದು ಎಂದು ಆ ಶಾಸನದ ಮಹತ್ವವನ್ನು ವಿವರಿಸಿದರು.. ಹಲವು ರಾಜಮನೆತನಗಳ ಇತಿಹಾಸವು ನಮಗೆ ಶಾಸನಗಳಿಂದಲೇ ದೊರೆತಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮತ್ತೊಬ್ಬ ಇತಿಹಾಸ ತಜ್ಞರು , ಹಾಗೂ ಕರ್ನಾಟಕ ಇತಿಹಾಸ ಅಕಾದೆಮಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ .ಎಲ್ . ರಾಜಶೇಖರ್ ರವರು ಮಾತನಾಡಿ ನಮ್ಮ ಕನ್ನಡ ಸಾಹಿತ್ಯಕ್ಕೆ ಶಾಸನಗಳೇ ತಾಯಿಬೇರು, ನಮ್ಮ ಇತಿಹಾಸವನ್ನು ನಾವೇ ಮರೆತರೆ, ನಮ್ಮ ಮುಂದಿನ ಪೀಳಿಗೆ ನಾಡನ್ನೇ ಮರೆಯಬಹುದು ಎಂದು ಎಚ್ಚರಿಸಿದರು. ಅಲಯನ್ಸ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ II ವಿವೇಕಾನಂದ ಸಜ್ಜನ್ ರವರು ಮಾತನಾಡಿ ಇತಿಹಾಸ ಕಲಿಕೆಗೆ ಕೇವಲ ಕಲಾ ವಿಭಾಗದ ವಿದ್ಯಾರ್ಥಿಗಳು ಅಷ್ಟೇ ಅಲ್ಲ.. ಇತಿಹಾಸ ತಿಳಿಯಬೇಕು ಎಂಬ ಹಂಬಲ ಇರುವ ಯಾರಾದರೂ ಕಲಿಯಬಹುದು..ನಮ್ಮ ಸುತ್ತಮುತ್ತಲೇ ಬಹಳಷ್ಟು ಇತಿಹಾಸ ಇನ್ನೂ ನೆಲದಡಿ ಅಡಗಿದೆ.. ಅದನ್ನು ಹೆಕ್ಕಿ ತೆಗೆಯುವ ಮೂಲಕ ಇತಿಹಾಸದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಅಲಯನ್ಸ್ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಶ್ರೀ ನರೇಂದ್ರ ಎಂ, ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶಾಂತಕುಮಾರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಎಲ್ಲರೂ ಭಾಗವಹಿಸಿದ್ದರು.

After revaluation, the marks were increased.
29/04/2026

After revaluation, the marks were increased.

20/04/2026
||ಜೈ ಶ್ರೀ ಗುರುದೇವ್||ದಿನಾಂಕ 15.04.2026 ಬುಧವಾರ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ "ಶ್ರೀಗುರು ಭೈರವೈಕ್ಯ ಮಂದಿ...
15/04/2026

||ಜೈ ಶ್ರೀ ಗುರುದೇವ್||
ದಿನಾಂಕ 15.04.2026 ಬುಧವಾರ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ "ಶ್ರೀಗುರು ಭೈರವೈಕ್ಯ ಮಂದಿರದ' ಲೋಕಾರ್ಪಣೆ ಕಾರ್ಯಕ್ರಮವು *ಪರಮಪೂಜ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ *ನೆರವೇರಿತು. ಈ ಕಾರ್ಯಕ್ರಮದಲ್ಲಿ *ಭಾರತ ಸರ್ಕಾರ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ರವರು* ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಎಚ್.ಡಿ.ದೇವೇಗೌಡ ಅವರು, ಗುಜರಾತ್‌ ರಾಜ್ಯದ ಶ್ರೀ ಪರಮಾತ್ಮಾನಂದ ಸರಸ್ವತಿ ಜೀ, ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹೋಟ್ ಅವರು, ಕೇಂದ್ರ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು, ಶ್ರೀ ಶೋಭಾ ಕರಂದ್ಲಾಜೆ ಅವರು , ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ ಅವರು , ವಿಧಾನಸಭೆಯ ಪ್ರತಿಪಕ್ಷದ ನಾಯಕ ಶ್ರೀ ಆರ್.ಅಶೋಕ್ ಮತ್ತಿತರ ಗಣ್ಯರು ಹಾಗೂ ಶ್ರೀ ಮಠದ ಸದ್ಭಕ್ತರು ಉಪಸ್ಥಿತರಿದ್ದರು.

Science Board Results-2026
11/04/2026

Science Board Results-2026

Commerce Board results-2026
11/04/2026

Commerce Board results-2026

Address

Nagarur Village, Dasanpura Hobli, Bangalore North Taluk, Bangalore Urban District, Karnataka-563162
Bangalore
562162

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919481679476

Alerts

Be the first to know and let us send you an email when BGS PU College Nagarur posts news and promotions. Your email address will not be used for any other purpose, and you can unsubscribe at any time.

Contact The University

Send a message to BGS PU College Nagarur:

Share