24/08/2026
🌾✨ ರಾಗಿ ಸೊಗಡಿನಲ್ಲಿ ಕನ್ನಡತನದ ಸಂಭ್ರಮ! 💛❤️
ಸೌಂದರ್ಯ ಕನ್ನಡ ಸಾಹಿತ್ಯ ವೇದಿಕೆ 2026–27 ವತಿಯಿಂದ ಆಯೋಜಿಸಲಾದ “ರಾಗಿ ಔತಣಕೂಟ ಮತ್ತು ಖಾದ್ಯಗಳ ಪ್ರದರ್ಶನ” ಕಾರ್ಯಕ್ರಮವು ನಮ್ಮ ನಾಡಿನ ಆಹಾರ ಪರಂಪರೆ, ಆರೋಗ್ಯ ಮತ್ತು ಕನ್ನಡ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸಿತು. ✨💛❤️
💛❤️ ಪ್ರಸಿದ್ಧ ಕನ್ನಡ ಲೇಖಕಿ ದೀಪಾ ಕೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ರಾಗಿ ಮತ್ತು ಕನ್ನಡತನ” ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. 🌾
💛❤️ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ 50ಕ್ಕೂ ಹೆಚ್ಚು ಬಗೆಯ ರಾಗಿ ಖಾದ್ಯಗಳ ಪ್ರದರ್ಶನ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಸಾಂಪ್ರದಾಯಿಕ ಆಹಾರದ ವೈವಿಧ್ಯತೆಯನ್ನು ಅನಾವರಣಗೊಳಿಸಿತು. ವಿದ್ಯಾರ್ಥಿಗಳು ರಾಗಿಯಿಂದ ತಯಾರಿಸಿದ ವಿಶೇಷ ಭೋಜನವನ್ನು ಸವಿದು, ಕಲಿಕೆಯ ಜೊತೆಗೆ ನಮ್ಮ ಆಹಾರ ಸಂಸ್ಕೃತಿಯ ಸವಿಯನ್ನೂ ಅನುಭವಿಸಿದರು. 🍽️✨
ರಾಗಿ ತಿನ್ನೋಣ, ಆರೋಗ್ಯ ಬೆಳೆಸೋಣ, ರೈತರನ್ನು ಬೆಂಬಲಿಸೋಣ! 🌾💚