02/09/2026
ಎನ್ ಎಸ್ ಎಸ್ ಶಿಬಿರ
DHI ವಿದ್ಯಾರ್ಥಿಗಳು 2ND, 3RD ಹಾಗೂ INTERNSHIP ವಿದ್ಯಾರ್ಥಿಗಳು ಕಡ್ಲೆ ಬಾಳು ಹಾಗೂ ಅರಸಪುರ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ಒಂದು ತಿಂಗಳ ಕಾಲ ಕ್ಷೇತ್ರ ಅಧ್ಯಯನದಲ್ಲಿ ಅಂಗನವಾಡಿ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, ಪಶು ಇಲಾಖೆ, ಪಿ ಎಸ್ ಸಿ ಕೇಂದ್ರ ಅಧ್ಯಯನದಲ್ಲಿ ಲಾರ್ವ ಸರ್ವೆ, ಮನೆಮನೆಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಅಲ್ಲಿಯ ಸ್ಥಳೀಯ ಜನರ ಆರೋಗ್ಯ್ರದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದು ಇದಕ್ಕೆ ಸಂಬoಧಿಸಿದoತೆ ದಿನಾಂಕ 24/08/2026 ಮತ್ತು 25/08/2026 ರಂದು ಲುಂಬಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜ್‌ನ ವತಿಯಿಂದ ಎನ್ ಎಸ್ ಎಸ್ ಶಿಬಿರವನ್ನು ಅರಸಪುರ ಕಡ್ಲೆೆಬಾಳುರಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಯಾದ ಗಂಗಾಧರ್ ಜಿ ವಿ ಅವರು ವಹಿಸಿಕೊಂಡಿದ್ದರು. ದಿನಾಂಕ 24/08/2026 ರಂದು ಕಾರ್ಯಕ್ರಮ ಉದ್ಘಾಟನೆಯನ್ನು ಕೊಟ್ರಯ್ಯ ಸರ್, ಡಾ|| ಪ್ರಮೋದ್ (ಪಿ.ಎಚ್.ಸಿ ಅರಸಪುರ), ಸುರೇಶ್ (ಎಸ್.ಡಿ.ಎಂ.ಸಿ ಅಧ್ಯಕ್ಷರು) ನೆರವೇರಿಸಿದರು. ದಿನಾಂಕ 25/08/2026 ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಕೊಟ್ರಯ್ಯ ಸರ್ ಡಾ|| ಪ್ರಮೋದ್ (ಪಿ.ಎಚ್.ಸಿ ಅರಸಪುರ), ಸುರೇಶ್ (ಎಸ್.ಡಿ.ಎಂ.ಸಿ ಅಧ್ಯಕ್ಷರು) ನೆರವೇರಿಸಿದರು ಯೋಗೇಶ್ ಮಾಜಿ ಅಧ್ಯಕ್ಷರು, ಮಂಜುಳಾ ಮಹಿಳಾ ಸಮಾಜ ಮುಖ್ಯಸ್ಥರು, ಮಹಾಂತೇಶ್ ಯುವ ಮುಖಂಡರು, ಎನ್.ಎಸ್.ಎಸ್ ಕಮಿಟಿ, ವಾಸನ್ ಐ ಕೇರ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಿ.ಎಚ್.ಐ / ಡಿ.ಓ.ಟಿ / ಡಿ.ಎಂ.ಎಲ್.ಟಿ / ಡಿ.ಓ.ಟಿ & ಎ.ಟಿ., ವಿದ್ಯಾರ್ಥಿಗಳು ಎರಡು ದಿನಗಳಲ್ಲಿ ಎನ್.ಎಸ್.ಎಸ್ ಕ್ಯಾಂಪ್ಗೆ ಸಂಬoಧಿಸಿದ ಅನೇಕ ಸಮಾಜ ಮುಖಿ ಕೆಲಸಗಳನ್ನು ನೆರವೇರಿಸಿದರು. 24/08/2026 ರಂದು ಜಾಥಾ ಕಾರ್ಯಕ್ರಮವನ್ನು, ಸ್ವಚ್ಛತಾ ಕಾರ್ಯಕ್ರಮವನ್ನು ಮತ್ತು ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಿನಾಂಕ 25/08/2026 ರಂದು ಬ್ಲಡ್ ಕ್ಯಾಂಪ್, ಬಿ.ಪಿ. ಶುಗರ್ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಕೊಟ್ರಯ್ಯ ಸರ್ ಅವರು ಕಾರ್ಯಕ್ರಮ ಕುರಿತು ತಮ್ಮ ಶಾಲೆಯ ಮಕ್ಕಳಿಗೆ ಮತ್ತು ತಮ್ಮ ಊರಿನ ಜನತೆಗೆ ಸ್ವಚ್ಛತೆ, ರಕ್ತದಾನ ಶಿಬಿರ, ಕಣ್ಣಿನ ಪರೀಕ್ಷೆ, BP, SUGAR ಚೆಕ್ ಅಪ್ ಉಪಯೋಗ ಪಡೆದುದರ ನೆನೆದು ಆಡಳಿತ ಮಂಡಳಿ, ಕಾಲೇಜು ಉಪನ್ಯಾಸಕರಿಗೆ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಗಂಗಾಧರ್ ಜಿ ವಿ ಸರ್ ಅವರು GEN Z ವಿದ್ಯಾರ್ಥಿಗಳು ಫೋನಿನಿಂದ ದೂರವಾಗಿ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ತಿಳಿಸಿದರು ಮತ್ತು ಊರಿನ ಜನರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚಿಸಿದರು....