Govt. First Grade College, Saligrama

Govt. First Grade College, Saligrama Accredited with 'B'++grade by the NAAC. Well equipped college found in a rural background with higher

ಜಿಲ್ಲಾ ಮಟ್ಟದ ಇ ಎಲ್ ಸಿ ಸ್ಪರ್ಧೆ - ಸಾಲಿಗ್ರಾಮ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ದೀಪು ಎಚ್.ಆರ್ ರಾಜ್ಯ ಮಟ್ಟಕ್ಕೆ ಆಯ್ಕೆ​ಮೈಸೂರು, ಡಿಸೆಂಬ...
20/12/2025

ಜಿಲ್ಲಾ ಮಟ್ಟದ ಇ ಎಲ್ ಸಿ ಸ್ಪರ್ಧೆ - ಸಾಲಿಗ್ರಾಮ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿ ದೀಪು ಎಚ್.ಆರ್ ರಾಜ್ಯ ಮಟ್ಟಕ್ಕೆ ಆಯ್ಕೆ

​ಮೈಸೂರು, ಡಿಸೆಂಬರ್ 20, 2025:
ಪಟ್ಟಣದ ಸಾಲಿಗ್ರಾಮ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯಾದ ದೀಪು ಎಚ್.ಆರ್ ಅವರು ಜಿಲ್ಲಾ ಮಟ್ಟದ ಚುನಾವಣಾ ಸಾಕ್ಷರತಾ ಕ್ಲಬ್ (ELC) ವತಿಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು ಇಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
​ಈ ಸಾಧನೆಯ ಮೂಲಕ ಅವರು ದಿನಾಂಕ 30-12-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ದೀಪು ಅವರ ಈ ಗಮನಾರ್ಹ ಸಾಧನೆಗೆ ಕಾಲೇಜಿನ ಇ ಎಲ್ ಸಿ ಸಮಿತಿ, ರಾಜ್ಯಶಾಸ್ತ್ರ ವಿಭಾಗ ಹಾಗೂ ಸಿಬ್ಬಂದಿ ಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿರುವ ಕಾಲೇಜಿನ ELC ಸಂಚಾಲಕರಾದ ಡಾ. ರಾಜೇಶ ಎ ಎಸ್ ಮತ್ತು ಪ್ರಾಂಶುಪಾಲರಾದ ಡಾ. ಗೋವಿಂದೇಗೌಡ ಅವರು ದೀಪು ಎಚ್.ಆರ್ ಅವರಿಗೆ ಮುಂದಿನ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ್ದಾರೆ.

🏆 R K B Y THOTAPPA ENDOWMENT CASH PRIZE ಪಡೆದ ವಿದ್ಯಾರ್ಥಿ ಮಾನಸ S V  ನಿಮಗೆ ಅಭಿನಂದನೆಗಳು💐​ನಮ್ಮ ಕಾಲೇಜಿನ ವಿದ್ಯಾರ್ಥಿ ಪ್ರಸ್ತುತ ಮೈ...
12/12/2025

🏆 R K B Y THOTAPPA ENDOWMENT CASH PRIZE ಪಡೆದ ವಿದ್ಯಾರ್ಥಿ ಮಾನಸ S V ನಿಮಗೆ ಅಭಿನಂದನೆಗಳು💐

​ನಮ್ಮ ಕಾಲೇಜಿನ ವಿದ್ಯಾರ್ಥಿ ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಮಾನಸ ಎಸ್. ವಿ. ಅವರಿಗೆ,
​ರಾಜ್ಯಶಾಸ್ತ್ರ ವಿಭಾಗದ ಪರವಾಗಿ ಮತ್ತು ಎಲ್ಲ ಸಿಬ್ಬಂದಿಯ ಪರವಾಗಿ ಅಭಿನಂದನೆಗಳು 💐💐💐
ಇವರು R K B Y THOTAPPA ENDOWMENT CASH PRIZE ( ದತ್ತಿ ನಿಧಿ ) ಪಡೆದು ಕಾಲೇಜಿಗೆ ಗೌರವ ತಂದಿರುತ್ತಾರೆ. ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಇವರ ಈ ಸಾಧನೆಯು ವಿಭಾಗಕ್ಕೆ ಹೆಮ್ಮೆಯನ್ನು ತಂದಿದೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಇವರು ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಷಯದ ಸ್ನಾತಕೋತ್ತರ ವಿಭಾಗದ PG -CET ಪರೀಕ್ಷೆಯಲ್ಲಿಯೂ ಮೊದಲ ಸ್ಥಾನವನ್ನು ಪಡೆದಿದ್ದರು. ಇವರ ಶೈಕ್ಷಣಿಕ ಪಯಣದಲ್ಲಿ ಇದೇ ಉತ್ಸಾಹ, ಸಮರ್ಪಣೆ ಮತ್ತು ಯಶಸ್ಸನ್ನು ಮುಂದುವರೆಸಿಕೊಂಡು ಹೋಗಲಿ ಎಂದು ಹಾರೈಸೋಣ....

ಡಾ. ರಾಜೇಶ ಎ ಎಸ್
ಮುಖ್ಯಸ್ಥರು
ರಾಜ್ಯಶಾಸ್ತ್ರ ವಿಭಾಗ

ಸಂವಿಧಾನ ದಿನಾಚರಣೆ 26-11-2025​ಸಂವಿಧಾನದ ಮಹತ್ವವನ್ನು ಸ್ಮರಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳನ್ನು ಬಿತ್ತುವ ಉದ್ದೇಶದಿಂದ ರಾ...
26/11/2025

ಸಂವಿಧಾನ ದಿನಾಚರಣೆ 26-11-2025

​ಸಂವಿಧಾನದ ಮಹತ್ವವನ್ನು ಸ್ಮರಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಸಂವಿಧಾನದ ಆಶಯಗಳನ್ನು ಬಿತ್ತುವ ಉದ್ದೇಶದಿಂದ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಲಿಗ್ರಾಮದಲ್ಲಿ ದಿನಾಂಕ 26-11-2025ರಂದು ಸಂವಿಧಾನ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.





ಪದವಿ ಕಾಲೇಜಿನಲ್ಲಿ 'ರಂಗೋಲಿಯ ಚಿತ್ತಾರ'​ಸಾಲಿಗ್ರಾಮ, ನವೆಂಬರ್ 15, 2025:​ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಲಿಗ್ರಾಮದಲ್ಲಿ ರಾಜ್ಯಶಾ...
15/11/2025

ಪದವಿ ಕಾಲೇಜಿನಲ್ಲಿ 'ರಂಗೋಲಿಯ ಚಿತ್ತಾರ'

​ಸಾಲಿಗ್ರಾಮ, ನವೆಂಬರ್ 15, 2025:
​ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಲಿಗ್ರಾಮದಲ್ಲಿ ರಾಜ್ಯಶಾಸ್ತ್ರ ವಿಭಾಗ, ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಐಕ್ಯೂಎಸಿ ಸಹಯೋಗದಲ್ಲಿ 'ಪದವಿ ಕಾಲೇಜಿನಲ್ಲಿ ಸಂವಿಧಾನಿಕ ಮೌಲ್ಯಗಳ ರಂಗೋಲಿಯ ಚಿತ್ತಾರ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

​​ಕಾರ್ಯಕ್ರಮವು ಮುಖ್ಯವಾಗಿ ಸಂವಿಧಾನಿಕ ಮೌಲ್ಯಗಳು ಮತ್ತು ಮತದಾರರ ಸಾಕ್ಷರತೆ ಹಾಗೂ ಚುನಾವಣಾ ಆಯೋಗದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿತ್ತು. ವಿದ್ಯಾರ್ಥಿಗಳು ರಂಗೋಲಿಯ ಕಲಾತ್ಮಕ ಮಾಧ್ಯಮದ ಮೂಲಕ ಈ ಗಂಭೀರ ವಿಷಯಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಿದರು.

​ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಕಲೆ ಮತ್ತು ಸೃಜನಶೀಲತೆಯ ಮೂಲಕ ಸಂವಿಧಾನಿಕ ಮೌಲ್ಯಗಳ ವಿಷಯಗಳನ್ನು ಸರಳ ಮತ್ತು ಆಕರ್ಷಕ ರೀತಿಯಲ್ಲಿ ವ್ಯಕ್ತಪಡಿಸಲು ಈ ಕಾರ್ಯಕ್ರಮವು ವೇದಿಕೆ ಒದಗಿಸಿದೆ. ಇದರಿಂದ ಕಲಿಕೆಯು ಹೆಚ್ಚು ಪರಿಣಾಮಕಾರಿ ಮತ್ತು ಶಾಶ್ವತವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಶ ಎ.ಎಸ್. ಅವರು "ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ಸಂವಿಧಾನಿಕ ಮೌಲ್ಯಗಳು. ಯುವ ಮತದಾರರು ಈ ಮೌಲ್ಯಗಳ ಬಗ್ಗೆ ಅರಿತುಕೊಂಡು, ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು," ಎಂದು ಕರೆ ನೀಡಿದರು. ಸಂವಿಧಾನಿಕ ಮೌಲ್ಯಗಳ ಕುರಿತ ರಂಗೋಲಿ ಸ್ಪರ್ಧೆಯು ಇಂದಿನ ಸಮಾಜದಲ್ಲಿ ಮತ್ತು ಶೈಕ್ಷಣಿಕ ವಲಯದಲ್ಲಿ ಅತ್ಯಂತ ಪ್ರಸ್ತುತವಾಗಿದೆ, ಈ ರೀತಿಯ ಸ್ಪರ್ಧೆಗಳ ಮುಖಾಂತರ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
​ರಂಗೋಲಿ ಸ್ಪರ್ಧೆಯಲ್ಲಿ ಕಾಲೇಜಿನ ಒಟ್ಟು 48 ವಿದ್ಯಾರ್ಥಿಗಳು 10 ತಂಡಗಳಾಗಿ ಭಾಗವಹಿಸಿದ್ದರು. ಭಾಗವಹಿಸಿದ ತಂಡಗಳು ತಮ್ಮ ರಂಗೋಲಿ ಚಿತ್ರಗಳಲ್ಲಿ ಭಾರತೀಯ ಸಂವಿಧಾನದ ಪೀಠಿಕೆ, ಮತದಾನದ ಮಹತ್ವ, ಚುನಾವಣಾ ಆಯೋಗದ ಚಿಹ್ನೆಗಳು ಮತ್ತು ಪ್ರಜಾಪ್ರಭುತ್ವದ ಸಂಕೇತಗಳನ್ನು ಅತ್ಯಂತ ಕಲಾತ್ಮಕವಾಗಿ ಮತ್ತು ಸಂದೇಶಪೂರ್ಣವಾಗಿ ಬಿಂಬಿಸಿದರು. ವಿದ್ಯಾರ್ಥಿಗಳು ಬಿಡಿಸಿದ ರಂಗೋಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಗಮನ ಸೆಳೆದವು.
​ಕಾರ್ಯಕ್ರಮದ ಯಶಸ್ಸಿಗೆ ರಾಜ್ಯಶಾಸ್ತ್ರ ವಿಭಾಗ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್‌ನ ಸದಸ್ಯರು ಶ್ರಮಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಮೈಸೂರು ಇಲ್ಲಿ ನಡೆದ ಮೂರು ದಿನಗಳ ನಿಪುಣ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಕಾಲ...
02/11/2025

ಶ್ರೀ ಜಯಚಾಮರಾಜೇಂದ್ರ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಮೈಸೂರು ಇಲ್ಲಿ ನಡೆದ ಮೂರು ದಿನಗಳ ನಿಪುಣ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು.
ದಿನಾಂಕ 28-10-2025 ರಿಂದ 30-10-2025



ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ನಗರದಲ್ಲಿ ನಡೆದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ  ಒಂದು ದಿನದ ಪ್ರವೇಶ್ ತರಬೇತಿ ಶಿಬಿರದಲ್ಲಿ ಭಾಗವಹ...
02/11/2025

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ನಗರದಲ್ಲಿ ನಡೆದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಒಂದು ದಿನದ ಪ್ರವೇಶ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ರೋವರ್ಸ್ ವಿದ್ಯಾರ್ಥಿಗಳು.
ದಿನಾಂಕ 26-09-2025



ಭಾರತ್ ಸ್ಕೌಟ್ಸ್ & ಗೈಡ್ಸ್  ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ.20-09-2025
20/09/2025

ಭಾರತ್ ಸ್ಕೌಟ್ಸ್ & ಗೈಡ್ಸ್
ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದ ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ.
20-09-2025

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಾಥಾ​ಸಾಲಿಗ್ರಾಮ: ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಹಾಗೂ ಸೌಟ್ಸ್ & ಗ...
20/09/2025

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಾಥಾ

​ಸಾಲಿಗ್ರಾಮ: ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಹಾಗೂ ಸೌಟ್ಸ್ & ಗೈಡ್ಸ್ ಘಟಕಗಳು, ಗ್ರಾಮ ಪಂಚಾಯತ್ ಸಾಲಿಗ್ರಾಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಲು ಸಾಲಿಗ್ರಾಮದಲ್ಲಿ ಬೃಹತ್ ಜಾಥಾ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕಂಚಿನಕೆರೆ ಗೋವಿಂದೇಗೌಡ ರವರು ಜಾಥಾವನ್ನು ಉದ್ಘಾಟಿಸಿ ಮಾತನಾಡಿ, "ಸಮಾಜದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಸುಧಾರಿಸಲು ಸಮೀಕ್ಷೆ ಅತಿ ಮುಖ್ಯವಾಗಿದೆ. ಇದು ಸರ್ಕಾರಕ್ಕೆ ನೀತಿಗಳನ್ನು ರೂಪಿಸಲು ನೆರವಾಗುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸರ್ಕಾರದ ವಿವಿಧ ಯೋಜನೆಗಳ ಯಶಸ್ಸಿಗೆ, ಸಮಾಜದ ಪ್ರಗತಿಗೆ ಮತ್ತು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು. ಸಾರ್ವಜನಿಕರು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಖರ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟಣದ ಗಾಂಧಿ ವೃತ್ತ ದಲ್ಲಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿಯುಳ್ಳ ಕರಪತ್ರಗಳನ್ನು ಮನೆ ಮನೆಗಳಿಗೆ ಹಂಚಿಕೆ ಮಾಡಿದರು. ಅಂಗಡಿಗಳು, ತಳ್ಳುವ ಗಾಡಿಗಳು, ಹೂವಿನ ವ್ಯಾಪಾರಿಗಳು, ಗುಜರಿಗಳಲ್ಲಿ ಕೆಲಸ ಮಾಡುವವರಿಗೂ ಕರ ಪತ್ರ ನೀಡಿದ್ದಲ್ಲದೆ, ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡುವಂತೆ ತಿಳಿಸಲಾಯಿತು. ಬಸ್ ನಿಲ್ದಾಣಕ್ಕೆ ಜಾಥಾ ಮೂಲಕ ತೆರಳಿದ ವಿದ್ಯಾರ್ಥಿಗಳು ಬಸ್ ಪ್ರಯಾಣಿಕರು, ಬಸ್ ಗಾಗಿ ಕಾದು ಕುಳಿತಿದ್ದ ಸಾರ್ವಜನಿಕರು ಹಾಗೂ ಬೈಕ್ ಸವಾರರು, ಪೆಟ್ರೋಲ್ ಬಂಕ್ ಕೆಲಸಗಾರರು, ರೈತರಿಗೂ ಕರಪತ್ರ ಹಂಚಿ ಸಮೀಕ್ಷೆಯ ಮಾಹಿತಿ ಮಹತ್ವ ತಿಳಿಸಿಕದರು. ವಿದ್ಯಾರ್ಥಿಗಳು ಸುಡು ಬಿಸಿಲನ್ನೂ ಲೆಕ್ಕಿಸದೆ ಇಡೀ ಸಾಲಿಗ್ರಾಮದ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಜಾಥಾ ಮೂಲಕ ತೆರಳಿ ಘೋಷಣೆಗಳನ್ನು ಕೂಗಿ, ಬ್ಯಾನರ್, ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬೃಹತ್ ಜಾಗೃತಿ ಜಾಥಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.​ಈ ಜಾಥಾದಲ್ಲಿ ಕಾಲೇಜಿನ ಅಧ್ಯಾಪಕರಾದ ಮಧು ಎಚ್.ಎಸ್, ಡಾ. ರಾಜೇಶ ಎ.ಎಸ್, ರಾಜಶೇಖರ್, ಶ್ರೀನಿವಾಸ್, ಕುಮಾರ ಎಚ್.ಎಸ್, ಸುರೇಶ ಛಲವಾದಿ, ಡಾ. ಸುವರ್ಣ, ಡಾ. ಪ್ರತಿಮಾ, ಮಂಜುನಾಥ್, ಡಾ. ಸತ್ಯನಾರಾಯಣ, ಡಾ. ತಾಸೀನ್, ಡಾ. ಗಾಯಿತ್ರಮ್ಮ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಲಿಗ್ರಾಮದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ​ಸಾಲಿಗ್ರಾಮ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು...
15/09/2025

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಾಲಿಗ್ರಾಮದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ

​ಸಾಲಿಗ್ರಾಮ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ‘ಪ್ರಜಾಪ್ರಭುತ್ವದ ಮಹತ್ವ, ಸವಾಲುಗಳು ಹಾಗೂ ನನ್ನ ಮತ ನನ್ನ ಹಕ್ಕು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತ ಸಂವಿಧಾನದ ಪ್ರಸ್ತಾವನೆಗೆ ಪುಷ್ಪಾರ್ಚನೆ ಹಾಗೂ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೂಕಿಯ ಬೇಗಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ​ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ತಹಶೀಲ್ದಾರ್ ರೂಕಿಯ ಬೇಗಂ, "ಯಾವುದೇ ಒತ್ತಡಕ್ಕೆ ಮಣಿಯದೆ, ಆಸೆ-ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ತಮ್ಮ ಮತವನ್ನು ಚಲಾಯಿಸಬೇಕು. ಮತದಾನ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ. ಅರ್ಹ ಯುವ ಮತದಾರರು ಯಾವುದೇ ಕಾರಣಕ್ಕೂ ಮತದಾನದಿಂದ ವಿಮುಖರಾಗಬಾರದು" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹೊಂದಿರುವ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆಯೂ ಅವರು ವಿವರಿಸಿದರು.
​ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಜೇಶ ಎ.ಎಸ್., ರವರು "ಪ್ರಜಾಪ್ರಭುತ್ವವು ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲ, ಅದು ನಮ್ಮ ಜೀವನ ವಿಧಾನ. ಪ್ರಜಾಪ್ರಭುತ್ವವು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಪಾತ್ರವನ್ನು ನಿರ್ವಹಿಸುವುದು ಅತಿ ಮುಖ್ಯ. ನಮ್ಮ ಮತದಾನದ ಹಕ್ಕನ್ನು ಬಳಸಿಕೊಂಡು ನಾವು ಸುಸ್ಥಿರ ಹಾಗೂ ಬಲಿಷ್ಠ ಸಮಾಜವನ್ನು ನಿರ್ಮಿಸಬಹುದು, ಭಾರತೀಯತೆ ನಮ್ಮ ಧರ್ಮವಾಗಬೇಕು, ಸಂವಿಧಾನವೇ ರಾಷ್ಟ್ರ ಗ್ರಂಥವಾಗಬೇಕು” ಎಂದು ತಿಳಿಸಿದರು.
​ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಇಂದಿನ ಯುವಕರು ಪ್ರಜಾಪ್ರಭುತ್ವದ ಭವಿಷ್ಯ ಎಂದು ತಿಳಿಸಿದ ಅವರು, ನಾಗರಿಕರ ಕರ್ತವ್ಯಗಳನ್ನು ಮರೆಯಬಾರದು ಎಂದು ಸಲಹೆ ನೀಡಿದರು.
​ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಶ್ರೀ ಸುರೇಶ್ ಚಲವಾದಿ ರವರು ಸ್ವಾಗತಿಸಿದರು. ಅಧ್ಯಾಪಕರಾದ ರಾಜಶೇಖರ ಎಂ ಎಂ, ಮಧು ಎಚ್ ಎಸ್, ಕುಮಾರ ಎಚ್ ಎಸ್, ಡಾ.ಸತ್ಯನಾರಾಯಣ, ಮಂಜುನಾಥ್, ಡಾ. ಪ್ರತಿಮಾ, ಡಾ. ಸುವರ್ಣ ಎಸ್, ಡಾ.ತಾಸೀನ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು💐
05/06/2025

ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು💐

ವಿವಿಧ ಸಮಿತಿಗಳ ಸಮಾರೋಪ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಸಂದರ್ಭ.
23/05/2025

ವಿವಿಧ ಸಮಿತಿಗಳ ಸಮಾರೋಪ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಸಂದರ್ಭ.

ವಿವಿಧ ಸಮಿತಿಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ನೃತ್ಯದ ಕೆಲವು ಚಿತ್ರಗಳು.
23/05/2025

ವಿವಿಧ ಸಮಿತಿಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ನೃತ್ಯದ ಕೆಲವು ಚಿತ್ರಗಳು.

Address

Govt. First Grade College, Saligrama
Krishnarajanagara
571604

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 2pm

Telephone

08223283388

Alerts

Be the first to know and let us send you an email when Govt. First Grade College, Saligrama posts news and promotions. Your email address will not be used for any other purpose, and you can unsubscribe at any time.

Share