16/08/2026
🇮🇳 ವಂದೇ ಮಾತರಂ — ದೇಶಭಕ್ತಿಯ ಗೀತೆಗೆ ಗೌರವದ ನಮನ! 🇮🇳
ದೇಶದ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ ಆಶಯದಂತೆ, ಐತಿಹಾಸಿಕ “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ, ಈ ಅಮರ ಗೀತೆಗೆ ಗೌರವ ಸಲ್ಲಿಸುವ ಹಾಗೂ ಯುವ ಪೀಳಿಗೆಗೆ ಇದರ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಕೆನರಾ ಎಕ್ಸಲೆನ್ಸ್ ಪಿ.ಯು. ಕಾಲೇಜು, ಗೋರೆ–ಕುಮಟಾ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ “ವಂದೇ ಮಾತರಂ” ಗಾಯನ ಸ್ಪರ್ಧೆ ಆಯೋಜಿಸಲಾಗುತ್ತಿದೆ.
🎤 ಕರ್ನಾಟಕ ರಾಜ್ಯದಾದ್ಯಂತದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ!
🇮🇳 ಸ್ಪರ್ಧೆಯ ಮುಖ್ಯ ಉದ್ದೇಶಗಳು: • “ವಂದೇ ಮಾತರಂ” ಗೀತೆಗೆ ಗೌರವ ಸಲ್ಲಿಸುವುದು
• ರಾಷ್ಟ್ರಭಕ್ತಿಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು
• “ವಂದೇ ಮಾತರಂ” ಗೀತೆಯ ಮಹತ್ವವನ್ನು ಯುವಜನತೆಗೆ ಪರಿಚಯಿಸುವುದು
• ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವುದು
🏆 ಅತ್ಯುತ್ತಮವಾಗಿ ಹಾಡುವ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳು!
📜 ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುವುದು.
📢 ಸ್ಪರ್ಧೆಯ ನಿಯಮಗಳು, ನೋಂದಣಿ ಪ್ರಕ್ರಿಯೆ ಹಾಗೂ ಇತರ ಮಾಹಿತಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
🙏 ಈ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯ ಪ್ರೌಢಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ತಲುಪಿಸಿ.
ಮಾಹಿತಿಗಾಗಿ ಸಂಪರ್ಕಿಸಿ :9663119845, 87923 16456, 83108 91368