Campus Front - D.K District

Campus Front - D.K District Campus Front of India formed as a result of series of discussions held by Student organizations, which were active in taking up social and students issues.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಶಿಕ್ಷಕರ ದರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಭಾಗಿಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 900 ಅತಿಥ...
26/09/2022

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅತಿಥಿ ಶಿಕ್ಷಕರ ದರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಭಾಗಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 900 ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು ಕಳೆದ 4 ತಿಂಗಳಿನಿಂದ ಗೌರವಧನ ಬಿಡುಗಡೆಯಾಗಲಿಲ್ಲ ಮತ್ತು ಉದ್ಯೋಗದ ಭದ್ರತೆ ಇಲ್ಲ ಎಂಬ ಹಲವಾರು ಸಮಸ್ಯೆಯನ್ನು ಇಟ್ಟುಕೊಂಡು ಇಂದು ಅತಿಥಿ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆಯಾದ ಶ್ರೀಮತಿ ಚಂದ್ರಿಕಾ ಅವರ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಯಿತು.
ಅತಿಥಿ ಶಿಕ್ಷಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ನಿಯೋಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿ ಶಿಕ್ಷಕರನ್ನು ಗುಲಾಮರನ್ನಾಗಿ ನೋಡಿಕೊಳ್ಳಲಾಗುತ್ತಿದೆ ಸರ್ಕಾರ ಇವರ ಸಂಕಷ್ಟಗಳನ್ನ ನೋಡುತ್ತಿಲ್ಲ ಮತ್ತು ಸ್ಪಂದಿಸುತ್ತಿಲ್ಲ. ಇವತ್ತು ಕಾರ್ಮಿಕ ವರ್ಗ, ಶಿಕ್ಷಕ ವರ್ಗ, ಮತ್ತು ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡುವ ಪರಿಸ್ಥಿತಿ ಈ ಸರ್ಕಾರದ ದುರ್ಬಲ ಆಡಳಿತದ ನಿದರ್ಶನವಾಗಿದೆ. ಇವತ್ತು ಅತಿಥಿ ಶಿಕ್ಷಕರೊಂದಿಗೆ ಕೈ ಜೋಡಿಸದೆ ಪಾಠ ಮಾಡುವ ಸರ್ಕಾರಿ ಶಿಕ್ಷಕರು ಎನ್ ಈ ಪಿ 2020 ರ ಹೊಸ ಕರಾಳ ನೀತಿಯಿಂದ ಬೀದಿಗೆ ಬಂದು ಹೋರಾಟ ಮಾಡುವ ದಿನಗಳು ದೂರವಿಲ್ಲ ಎಂದು ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡ ಸಂಶುದ್ದೀನ್ ಎಚ್ಚರಿಸಿದರು ಹಾಗೂ ಸರ್ಕಾರ ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಅತಿಥಿ ಶಿಕ್ಷಕ ಸಂಘದ ಕಾರ್ಯದರ್ಶಿ ಚಿತ್ರಕಲಾ ಮತ್ತು ಪದಾಧಿಕಾರಿಗಳು, ಕ್ಯಾಂಪಸ್ ಫ್ರಂಟ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶ್ರಫ್ ಪೊರ್ಕೊಡಿ ಹಾಗೂ ಜಿಲ್ಲಾ ಮುಖಂಡರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಅತಿಥಿ ಶಿಕ್ಷಕರ ಬೇಡಿಕೆಯನ್ನು ಶೀಘ್ರ ಈಡೇರಿಕೆಗಾಗಿ ಶಿಕ್ಷಕರ ಜೊತೆ ಕ್ಯಾಂಪಸ್ ಫ್ರಂಟ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದೆ
25/09/2022

ದಕ್ಷಿಣ ಕನ್ನಡ ಜಿಲ್ಲೆಯ ಅತಿಥಿ ಶಿಕ್ಷಕರ ಬೇಡಿಕೆಯನ್ನು ಶೀಘ್ರ ಈಡೇರಿಕೆಗಾಗಿ ಶಿಕ್ಷಕರ ಜೊತೆ ಕ್ಯಾಂಪಸ್ ಫ್ರಂಟ್ ಪ್ರತಿಭಟನೆಯಲ್ಲಿ ಭಾಗಿಯಾಗಲಿದೆ

ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ರಾಷ್ಟ್ರೀಯ ಅಭಿಯಾನ ವಿಚಾರ ಸಂಕೀರ್ಣ ಕ್ಯಾಂ...
21/09/2022

ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ
ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ರಾಷ್ಟ್ರೀಯ ಅಭಿಯಾನ
ವಿಚಾರ ಸಂಕೀರ್ಣ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ

ಅತಿಥಿ ಶಿಕ್ಷಕರ ಗೌರವ ಧನವನ್ನು ಶೀಘ್ರ ವಿತರಿಸಿ ; ಕ್ಯಾಂಪಸ್ ಫ್ರಂಟ್ದ.ಕ ಜಿಲ್ಲೆಯ ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಗೌರವಧನ ನೀಡ...
18/09/2022

ಅತಿಥಿ ಶಿಕ್ಷಕರ ಗೌರವ ಧನವನ್ನು ಶೀಘ್ರ ವಿತರಿಸಿ ; ಕ್ಯಾಂಪಸ್ ಫ್ರಂಟ್

ದ.ಕ ಜಿಲ್ಲೆಯ ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಗೌರವಧನ ನೀಡದೆ ಸತಾಯಿಸುತ್ತಿರುವ ಸರಕಾರದ ಬೇಜವಬ್ದಾರಿಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.

ಕರ್ನಾಟಕದಲ್ಲಿ 2012 ರಿಂದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿ ಅವರಿಗೆ ಗೌರವಧನವನ್ನು ನೀಡುತ್ತಾ ಬಂದಿದೆ.ಈ ಹಿಂದೆ ತಿಂಗಳಿಗೆ ಏಳೂವರೆ ಸಾವಿರ ರೂಪಾಯಿ ನೀಡಿದರೆ ಈ ಶೈಕ್ಷಣಿಕ ಸಾಲಿನಲ್ಲಿ ಅದನ್ನು ಹತ್ತು ಸಾವಿರಕ್ಕೆ ಏರಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಸುಮಾರು 30 ಸಾವಿರ ಅತಿಥಿ ಶಿಕ್ಷಕರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 750 ವಿವಿಧ ಪದವಿಗಳನ್ನು ಪಡೆದ ಅತಿಥಿ ಶಿಕ್ಷಕರು ದಿನ ನಿತ್ಯ ಮಕ್ಕಳಿಗೆ ಪಾಠ ಮಾಡುವಲ್ಲಿ ನಿರತರಾಗಿದ್ದಾರೆ. ನಮ್ಮ ಜಿಲ್ಲೆಯ ಅತಿಥಿ ಶಿಕ್ಷಕರು 2022 ಮೇ 15 ರಿಂದ ಸೇವೆಗೆ ಹಾಜರಾಗಿದ್ದು ನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದಾರೆ. ಆದರೆ ಈ ವರೆಗೆ ಬಿಡಿಗಾಸನ್ನು ಕೊಡ ಸರ್ಕಾರ ನೀಡದೆ ಈ ಶಿಕ್ಷಕರನ್ನು ಕಂಗಾಲಾಗುವಂತೆ ಮಾಡಿದೆ.ಒಂದು ಕಡೆ ಉದ್ಯೋಗದಲ್ಲಿ ಭದ್ರತೆ ಇಲ್ಲ ಇನ್ನೊಂದು ಕಡೆ ಕನಿಷ್ಠ ವೇತನವೂ ಇಲ್ಲ, ಸಿಗಬೇಕಾದ ಅತಿ ಕನಿಷ್ಠ ಗೌರವಧಾನವನ್ನು ಪಡೆಯಬೇಕಾದರೆ ಪ್ರತಿಭಾರಿ ಬೀದಿಗಿಳಿಯಬೇಕಾದ ದುಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಪಾಠ ಮಾಡುವ ಅತಿಥಿ ಶಿಕ್ಷಕರ ಸಮಸ್ಯೆ ಮತ್ತು ಬಾಕಿ ಇರುವ 4 ತಿಂಗಳ ಗೌರವಧಾನವನ್ನು ಸರ್ಕಾರ,ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಿ ಬಿಡುಗಡೆಗೊಳಿಸಬೇಕು ಮಾತ್ರವಲ್ಲ ಇವರ ಗೌರವಧನವನ್ನು ಪ್ರತಿ ತಿಂಗಳಿನಂತೆ ನೀಡಬೇಕು, ಕನಿಷ್ಠ ವೇತನವನ್ನು ನೀಡಿ ಮುಂದಕ್ಕೆ ಇವರನ್ನು ಖಾಯಂ ಗೊಳಿಸಿ ಉದ್ಯೋಗಕ್ಕೆ ಭದ್ರತೆ ನೀಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಜಿಲ್ಲೆಯ ಎಲ್ಲಾ ಅತಿಥಿ ಶಿಕ್ಷಕರನ್ನು ಮತ್ತು ಜಿಲ್ಲೆಯ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಹೋರಾಟ ಮಾಡಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ತಾಜುದ್ದೀನ್ ಎಚ್ಚರಿಸಿದ್ದಾರೆ.

Campus Front Of India Mangalore Rural Districtheld Pla-Card demonstration at RAYMOND'S College Vamanjoor, Demanding for ...
17/09/2022

Campus Front Of India Mangalore Rural District
held Pla-Card demonstration at RAYMOND'S College Vamanjoor, Demanding for quick Release of their Former National Treasurer Athikur Rehman.

CAMPUS FRONT OF INDIA
MANGALORE RURAL DISTRICT

ದ.ಕ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರ ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಿಯೋಗಮಂಗಳೂರು :- ಜಿಲ್ಲೆಯ ಅ...
16/09/2022

ದ.ಕ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷರ ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಿಯೋಗ

ಮಂಗಳೂರು :- ಜಿಲ್ಲೆಯ ಅತಿಥಿ ಉಪನ್ಯಾಸಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಿಯೋಗವು ದ.ಕ ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷೆಯನ್ನು ಭೇಟಿಯಾಗಿ ಚರ್ಚಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 750 ಅತಿಥಿ ಶಿಕ್ಷಕರು ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಕಳೆದ ನಾಲ್ಕು ತಿಂಗಳಿನಿಂದ ಸರ್ಕಾರ ಗೌರವಧನ ನೀಡದೆ ಸತಾಯಿಸುತ್ತಿದೆ , ಇದರಿಂದಾಗಿ ದಿನ ನಿತ್ಯ ಶಾಲೆಗಳಿಗೆ ಬರಲೂ ಕೂಡ ಖರ್ಚಿಗೆ ದುಡ್ಡಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕನಿಷ್ಠ ವೇತನವೂ ಇಲ್ಲ, ಇನ್ನೊಂದು ಕಡೆ ಉದ್ಯೋಗದ ಭದ್ರತೆಯು ಇಲ್ಲದಾಗಿದೆ. ನಗು ಮುಖದಿಂದ ಮಕ್ಕಳಿಗೆ ಶಿಕ್ಷಣ ನೀಡುವ ನಮ್ಮ ನೋವುಗಳನ್ನು ಕೇಳಲು ಯಾರು ಇಲ್ಲ ಎಂದು ಅತಿಥಿ ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಚಂದ್ರಿಕ ಅಳಲನ್ನು ತೋಡಿಕೊಂಡರು. ಸಮಸ್ಯೆಗಳ ಪರಿಹಾರಕ್ಕೆ ಬೇಕಾಗಿ ನಡೆಸುವ ಎಲ್ಲಾ ನ್ಯಾಯಯುತ ಹೋರಾಟಕ್ಕೆ ಕ್ಯಾಂಪಸ್ ಫ್ರಂಟ್ ಸಂಪೂರ್ಣ ಬೆಂಬಲವಿದೆಯೆಂದು ಜಿಲ್ಲಾಧ್ಯಕ್ಷ ತಾಜುದ್ದೀನ್ ಇದೇ ಸಂದರ್ಭದಲ್ಲಿ ಹೇಳಿದರು.
ನಿಯೋಗದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕರಾದ ಆಫೀಜ್, ಶಾಹಿಕ್, ಮರ್ಝುಕ್ ಇದ್ದರು.

Campus Front Of India Mangalore City District held Pla-Card demonstration at PA college of Engineering MANGALORE , Deman...
14/09/2022

Campus Front Of India Mangalore City District held Pla-Card demonstration at PA college of Engineering MANGALORE , Demanding for quick Release of their Former National Treasurer Athikur Rehman.

CAMPUS FRONT OF INDIA
MANGALORE CITY DISTRICT

Campus Front Of India Mangalore City District held Pla-Card demonstration at Milagres College  MANGALORE , Demanding for...
14/09/2022

Campus Front Of India Mangalore City District held Pla-Card demonstration at Milagres College MANGALORE , Demanding for quick Release of their Former National Treasurer Athikur Rehman.

CAMPUS FRONT OF INDIA
MANGALORE CITY DISTRICT

Campus Front Of India Kalladka Area held Pla-Card demonstration on 12th of September 2022 at Kalladka junction, Demandin...
13/09/2022

Campus Front Of India Kalladka Area held Pla-Card demonstration on 12th of September 2022 at Kalladka junction, Demanding immediate Release of student leader and Former National Treasurer Athikur Rehman who was arrested with draconian UAPA with fabricated cases by state sponsored in hathras case.

CAMPUS FRONT OF INDIA DAKSHINA KANNADA

ಗೌರಿ ಲಂಕೇಶ್ ಹತ್ಯೆ ದಿನ ನೆನಪಿಸಿ  ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ   ಮೊಂಬತ್ತಿ ಪ್ರತಿಭಟನೆಮಂಗಳೂರು:...
05/09/2022

ಗೌರಿ ಲಂಕೇಶ್ ಹತ್ಯೆ ದಿನ ನೆನಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೊಂಬತ್ತಿ ಪ್ರತಿಭಟನೆ
ಮಂಗಳೂರು: ಪ್ರಖರ ಲೇಖಕಿ ಮತ್ತು ಹೋರಾಟಗಾರ್ತಿ ಸಂಘಪರಿವಾರದ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಮೊಂಬತ್ತಿ ಹೊತ್ತಿಸಿ ಕ್ಲಾಕ್ ಟವರ್ ಬಳಿ ಪ್ರತಿಭಟಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಮಾತನಾಡಿ ದಮನಿತರ ದ್ವನಿಯಾಗಿದ್ದ ಎಂ ಎಂ ಕಲ್ಬುರ್ಗಿ, ಪನ್ಸಾರೇ, ಗೌರಿಯ ಹತ್ಯೆಯ ಮೂಲಕ ಸಂಘಪರಿವಾರ ಅವರ ವಿಚಾರಗಳನ್ನು ಇಲ್ಲವಾಗಿಸುವ ಮೂರ್ಖ ಪ್ರಯತ್ನ ನಡೆಸಿದೆ,ಗಾಂಧಿಯಿಂದ ಗೌರಿಯ ಹತ್ಯೆಯ ತನಕ ನಡೆಸಿದ ಕ್ರೌರ್ಯ ದೇಶ ಮರೆತಿಲ್ಲ ಎಂದರು ಮತ್ತು ಮದ್ರಾಸಗಳ ಮೇಲೆ ನಿಗಾ ವಹಿಸುವ ಸರ್ಕಾರ ಸಂಘಪರಿವಾರದ ಶಾಖೆಗಳ ಮೇಲೆ ನಿಗಾ ವಹಿಸಿ ದೇಶದ್ರೋಹ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ ಎಂದರು.
ಪ್ರತಿಭಟನೆ ಸಭೆಯ ಅಧ್ಯಕ್ಷತೆಯನ್ನು ದ ಕ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷರಾದ ಶರಪುದ್ದೀನ್ ಬಜ್ಪೆ, ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಅಶ್ರಫ್ ಪೋರ್ಕೊಡಿ,ಬಂಟ್ವಾಳ ಜಿಲ್ಲಾಧ್ಯಕ್ಷರಾದ ಹಂದಾನ್, ವಿಟ್ಲ ಜಿಲ್ಲಾ ಕಾರ್ಯದರ್ಶಿ ಉಮರ್ ಮುಖ್ತಾರ್ ಮತ್ತು ಇತರೆ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ

ಸಂಘಿಗಳ ಗುಂಡೇಟಿಗೆ ಬಲಿಯಾದ ಹೋರಾಟಗಾರ್ತಿ ಹಾಗೂ ಪ್ರಗತಿಪರ ಲೇಖಕಿ ಗೌರಿ ಲಂಕೇಶ್ ರನ್ನು ಮತ್ತು ಅವರ ವಿಚಾರಗಳನ್ನು ನೆನೆಪಿಸುತ್ತಾ ಕ್ಯಾಂಪಸ್ ಫ್...
04/09/2022

ಸಂಘಿಗಳ ಗುಂಡೇಟಿಗೆ ಬಲಿಯಾದ ಹೋರಾಟಗಾರ್ತಿ ಹಾಗೂ ಪ್ರಗತಿಪರ ಲೇಖಕಿ ಗೌರಿ ಲಂಕೇಶ್ ರನ್ನು ಮತ್ತು ಅವರ ವಿಚಾರಗಳನ್ನು ನೆನೆಪಿಸುತ್ತಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಂಜೆ 6:30ಕ್ಕೆ ಮೊಂಬತ್ತಿ ಪ್ರತಿಭಟನೆ ಹಮ್ಮಿಕೊಂಡಿದೆ

ವಿದ್ಯಾರ್ಥಿ‌ ಸಮಸ್ಯೆಗಳನ್ನು ಬಗೆಹರಿಸಲು ಹಿಂದೇಟು ಹಾಕುವ ಮಂಗಳೂರು ವಿವಿ : ಶೀಘ್ರ ಪರಿಹಾರಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹಮಂಗಳೂರು ವಿಶ್ವವಿದ್ಯ...
26/08/2022

ವಿದ್ಯಾರ್ಥಿ‌ ಸಮಸ್ಯೆಗಳನ್ನು ಬಗೆಹರಿಸಲು ಹಿಂದೇಟು ಹಾಕುವ ಮಂಗಳೂರು ವಿವಿ : ಶೀಘ್ರ ಪರಿಹಾರಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವ ಬಗ್ಗೆ ಮತ್ತೆ ಮತ್ತೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿಶ್ವವಿದ್ಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್‌ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಆಗ್ರಹಿಸುತ್ತಿದೆ.

ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗಳ ಆಗರವಾಗಿದ್ದು, ಪರೀಕ್ಷೆಯ ಫಲಿತಾಂಶ ನೀಡದೆ, ಅಂಕ ಪಟ್ಟಿ ನೀಡದೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ನೀಡುತ್ತಿರುವ ಅಂಕಪಟ್ಟಿಯಲ್ಲಿ ಅನೇಕ ತಪ್ಪುಗಳು, ಕೆಲವರ ಅಂಕ ಪಟ್ಟಿ‌ ನೀಡದೆ ಇರುವುದು, ಫಲಿತಾಂಶದಲ್ಲಿ ತಾಂತ್ರಿಕ ಸಮಸ್ಯೆ, ಮರು ಮೌಲ್ಯಮಾಪನ ತುಂಬಾ ತಡವಾಗಿ ಆರಂಭಿಸುವುದು, ಮರು ಮೌಲ್ಯಮಾಪನದ ಮರುಪಾವತಿ ಮಾಡದೇ ಇರುವುದು, ಪರೀಕ್ಷಾ ದಿನಾಂಕವನ್ನು ತಿಂಗಳ ಮುಂಚಿತವಾಗಿ ನೀಡದೆ ಇರುವುದು, ಪರೀಕ್ಷಾ ಶುಲ್ಕ ಪ್ರತಿಬಾರಿಯೂ ಹೆಚ್ಚು ಮಾಡುತ್ತಿದ್ದು, SC,ST ವಿದ್ಯಾರ್ಥಿಗಳಿಗೆ ಇನ್ನೂ ಮಂಜೂರಾಗದ ಲಾಪ್ ಟಾಪ್ ಗಳು, ಎಸ್ಸಿ ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮುಂತಾದ ಸಮಸ್ಯೆಗಳು ಇಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕಂಟಕವಾಗುತ್ತಿದೆ.ಇಷ್ಟೆಲ್ಲಾ ಸಮಸ್ಯೆಗಳು ನಡೆಯುತ್ತಿರುವುದರ ನಡುವೆಯೇ ಮಂಗಳೂರು ವಿವಿಯಿಂದ ಶಿರವಸ್ತ್ರದ ನೆಪದಲ್ಲಿ ಕಿರುಕುಳ ನೀಡಿದ್ದರಿಂದ 16% ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡಿದ್ದು ಹಾಗೂ ಇತರ ಧರ್ಮದ ಆಚರಣೆಗಳಿಗೆ ವಿವಿ ಅವಕಾಶ ಮಾಡಿಕೊಡುತ್ತಿರುವುದರ ಮುಖಾಂತರ ತಾರತಮ್ಯ ಎಸಗುತ್ತಿದ್ದು ತೀವ್ರ ಖಂಡನೀಯವಾಗಿದೆ.
ಇಂತಹ ಗಂಭೀರ ಸಮಸ್ಯೆಗಳನ್ನು ಮಂಗಳೂರು ವಿವಿ ವಿದ್ಯಾರ್ಥಿಗಳು ಎದುರಿಸುತ್ತಿದ್ದು ಹಲವಾರು ಭಾರಿ ವಿದ್ಯಾರ್ಥಿಗಳು ಮನವಿ ಮಾಡಿದರೂ,ಹೋರಾಟ ನಿರತರಾದರೂ ಸಮಸ್ಯೆ ಬಗೆಹರಿಸಲು ವಿವಿ ಕುಲಪತಿಗಳು ಹಿಂದೇಟು ಹಾಕುತ್ತಿದ್ದಾರೆ. ಶೀಘ್ರ ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ತೀವ್ರ ಹೋರಾಟವನ್ನು ಮಂಗಳೂರು ವಿವಿ ಎದುರಿಸಬೇಕಾದಿತು ಎಂದು ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಎಚ್ಚರಿಸಿದ್ದಾರೆ.

Address

Mangalore
575001

Alerts

Be the first to know and let us send you an email when Campus Front - D.K District posts news and promotions. Your email address will not be used for any other purpose, and you can unsubscribe at any time.

Contact The University

Send a message to Campus Front - D.K District:

Share