Al-Madeena Manjanady

Al-Madeena Manjanady Inevitable presence in the eductional and moral upliftment of the downtrodden society in Karanataka. Al Hamdulillah We Thank almighty ALLAH...

Al madeena Islamic Complex is a Distinguished educational institution for both islamic modern- general Education,situated in manjanady, a village just 18 km away from Mangalore, in south Karnataka amid the lace of greenery,Eye-catching beauty of nature. With a noble intention of protecting orphans-poor and to provide them free education right under Ahlussunna faiths, Al Madeena was founded in 1994

and lead by the reowned scholar Shaikuna Abbas Musliyar Under the blessed guidance of Thajul Ulama Sayyid Abduuahman Al Bukhari Ullal and Spiritual Leader Marhoom Manjanady Usthad CP muhammed kunhi Musliyar. Uon the rapid development in the span of sharp 18 years, multi storied bulidings in a spacious campus spread about 25 acres which compise Yatheem Khana (Orphanage) , Destitute Home, Boarding School , English Medium Primary & High school , Kannada Medium High School, Dars, Da'awa college, Womens College, Jeelani masjid, Al Madeena has Completed Successful 18 years in March 2012. Orphans here are ensured Luxurious food and accomodation with seprate cot,bed and other amenities, yearly 5 pairs of dress including uniforms as well as book materials. Under the determined headship of Shaikhuna Usthad, Committe members and dedicated servents in and abroad are committed to work hard for its integrated service & standard education. The Founder Shaikhuna ABBAS Usthad also well known for his dedicated service in the field of Dars.

10/03/2025
22/10/2024

ಅರಿವನು ಅರಗಿಸುವಾ ಜೊತೆಗೆ...
ಸಂಸ್ಕೃತಿ ಪಸರಿಸುವಾ ಮಳಿಗೆ...
ನಾಡಿನ ನಾಳೆಯ ಪ್ರಭುಗಳಿಗೆ...
ಭವಿಷ್ಯ ರೂಪಿಸುವಾ ಘಳಿಗೆ....

...2.0 ❤‍🩹❤‍🩹



Almadeena Manjanady

 ...✨  2.0 Almadeena Manjanady
21/10/2024

...✨

2.0



Almadeena Manjanady

 ೇಟಿ_ಅವರ_ಕೊನೆಯ_ಭೇಟಿಯಾಗಿರಬಹುದೆಂದು_ಅನಿಸಲಿಲ್ಲ✍🏼ಅಬ್ದುಲ್ ಖಾದರ್ ಸಖಾಫಿ(ಮ್ಯಾನೇಜಿಂಗ್ ಡೈರೆಕ್ಟರ್ ಅಲ್ ಮದೀನ)ನಿನ್ನೆಯ ದಿನ ಬಿ. ಸಿ ರೋಡಿನ ...
09/07/2024

ೇಟಿ_ಅವರ_ಕೊನೆಯ_ಭೇಟಿಯಾಗಿರಬಹುದೆಂದು_ಅನಿಸಲಿಲ್ಲ

✍🏼ಅಬ್ದುಲ್ ಖಾದರ್ ಸಖಾಫಿ
(ಮ್ಯಾನೇಜಿಂಗ್ ಡೈರೆಕ್ಟರ್ ಅಲ್ ಮದೀನ)

ನಿನ್ನೆಯ ದಿನ ಬಿ. ಸಿ ರೋಡಿನ ಸಾಗರ್ ಹಾಲಿನಲ್ಲಿ ಸಖಾಫಿ ಸಂಗಮದಲ್ಲಿದ್ದಾಗ ಆ ಅಗಲಿಕೆಯ ಮೆಸೇಜ್ ಬಂದಾಗ ಆ ಕ್ಷಣ ನಂಬಲಿಕ್ಕಾಗಲಿಲ್ಲ. ಅದು ಫೇಕ್ ಆಗಿರಲಿ ಎಂದೇ ಮನಸ್ಸು ಬಯಸಿತು. ಅಂತಹ ಅನಾರೋಗ್ಯದ ಸಮಸ್ಯೆ ಇಲ್ಲದಿದ್ದ, ಯಾವಾಗಲೂ ಕ್ರಿಯಾಶೀಲರಾಗಿಯೇ ಇರುತ್ತಿದ್ದ, ಹಿಂದಿನ ರಾತ್ರಿ ಕೂಡ ನಮ್ಮೂರ ಕಾಂಜಂಗಾಡ್ ಸಮೀಪದ ಕಮ್ಮಾಡಂ ಮಸೀದಿಯೊಂದರಲ್ಲಿ ಉಪದೇಶ, ದುಆಕ್ಕೆ ನೇತೃತ್ವ ನೀಡಿ ಆರೋಗ್ಯವಾಗಿಯೇ ತೆರಳಿದ್ದ ತಂಗಳರವರು ಮರುದಿನ ನಿಧನರಾದರೆಂದರೆ ತಕ್ಷಣ ನಂಬುವುದಾದರೂ ಹೇಗೆ?
ಆದರೆ ಅಲ್ಲಾಹನ ನಿಶ್ಚಯಿಸಿದ ಸಮಯದಲ್ಲಿ ಯಾರಿಗೂ ಯಾವ ಕ್ಷಣವೂ ಮರಣ ಬರಬಹುದು ಎಂಬ ವಾಸ್ತವ ಇದ್ದರೂ ಅದರ ಅರಿವಾಗುವುದು ಮತ್ತೆ ತಾನೆ? ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ವಫಾತ್ ಆದಾಗಲೂ ಹ. ಉಮರ್ (ರ) ಸಹಿತ ಬಹುತೇಕ ಸಹಾಬಿಗಳಿಗೂ ಕೂಡ ಈ ವಾಸ್ತವ ಅರಿವಾಗಲು ಸ್ವಲ್ಪ ಹೊತ್ತು ತಗಲಿತ್ತಷ್ಟೆ. ಹೆಚ್ಚೇಕೆ, ಈ ವಾಸ್ತವವನ್ನು ಮನಗಾಣಿಸಿ ಅವರನ್ನು ಸಮಾಧಾನಪಡಿಸಲು ಅಬೂಬಕರ್ ಸಿದ್ದೀಕ್(ರ) ರವರೇ ಮುಂದೆ ಬರಬೇಕಾಗಿತ್ತು.

ಸಯ್ಯದ್ ಕೂರತ್ ತಂಗಲ್ ರವರ ಅಗಲಿಕೆಯಿಂದ ಸಮುದಾಯ ಕಳೆದುಕೊಂಡದ್ದು ಆಲಿಮ್ ಆದ ಓರ್ವ ಪ್ರಮುಖ ಸಾದಾತರನ್ನು ಮಾತ್ರವಲ್ಲ, ಅತ್ಯಪೂರ್ವವಾದ ಸಾತ್ವಿಕ, ಆಧ್ಯಾತ್ಮಿಕ ಮಾರ್ಗದರ್ಶಿಯನ್ನು. ಯಾವುದೇ ರೀತಿಯ ಸಮಸ್ಯೆಗಳಿಗೆ ಆಧ್ಯಾತ್ಮಿಕ ರೀತಿಯಲ್ಲಿ ಪರಿಹಾರ ಸೂಚಿಸುವವರನ್ನು. ನೊಂದ ಮನಸ್ಸುಗಳಿಗೆ ಸಾಂತ್ವನದ ಸಿಂಚನ ನೀಡುವವರನ್ನು. ಕಷ್ಟಗಳನ್ನೆದುರಿಸುವವರಿಗೆ ಧೈರ್ಯ ತುಂಬುವವರನ್ನು.

ವೈದ್ಯರ ಚಿಕಿತ್ಸೆಯಿಂದ ಗುಣವಾಗದ ರೋಗಿಗಳಿಗೆ ನೆನಪಾಗುವುದು ಕೂರತ್ ತಂಗಲ್. ಆಸ್ಪತ್ರೆಯಲ್ಲಿ ರೋಗಿ ಗಂಭೀರಾವಸ್ಥೆಯಲ್ಲಿದ್ದರೆ, ಗರ್ಭಿಣಿಗೆ ಪ್ರಸವ ಸಂಕಷ್ಟ ಎದುರಾದರೆ ಬೇಕಾಗುವುದು ಕೂರತ್ ತಂಗಲ್. ಯಾರು ಫೋನ್ ಮಾಡಿದರೂ ಇವಕ್ಕೆಲ್ಲ ಫೋನ್ ನಲ್ಲೇ ಆಧ್ಯಾತ್ಮಿಕ ಪರಿಹಾರ ಸೂಚಿಸುವವರಾಗಿದ್ದರು ಖು ರ್ರತುಸ್ಸಾದಾತ್.

ಸಯ್ಯಿದ್ ರವರ ಶ್ರೇಷ್ಠತೆಯನ್ನು ಅವರ ತಾರುಣ್ಯದಲ್ಲೇ ಗುರುತಿಸಿದ್ದ ವ್ಯಕ್ತಿಯಾಗಿದ್ದರು ಮರ್ಹೂಮ್ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು. ತಾಜುಲ್ ಉಲಾಮಾರ ವಿಯೋಗಾನಂತರ ಅನೇಕ ಮೊಹಲ್ಲಾಗಳ ನಾಯಕರು ಶರಪುಲ್ ಉಲಾಮಾರಲ್ಲಿ ತಮ್ಮ ಮುಂದಿನ ಖಾಝಿಯಾರಾಗಬೇಕೆಂದು ಸಲಹೆ ಕೇಳಿದಾಗೆಲ್ಲ ಕೂರ ತಂಗಲ್ ರನ್ನು ನೇಮಿಸಿಕೊಳ್ಳಲು ಸೂಚಿಸುತ್ತಿದ್ದರು. ಕೂರತ್ ತಂಗಳ್ ರವರನ್ನು ಯಾರಾದರೂ ಅವಮಾನಿಸುವುದು ಕಂಡರೆ ಕೆಂಡಾಮಂಡಲವಾಗುತ್ತಿದ್ದರು. ವೇದಿಕೆಗಳಲ್ಲಿ ಕೂಡ ಅಂತಹವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು.

ವಿದೇಶದಲ್ಲಿ ಅಲ್ ಮದೀನದ ಸಹಾಯಕ್ಕಾಗಿ ಓರ್ವ ಹಿತೈಷಿ, ಉತ್ತಮ ದಾನಿಯೊಬ್ಬರಿದ್ದಾರೆ ಎಂದು ಹೇಳಿ ಒಬ್ಬ ಶ್ರೀಮಂತ ವ್ಯಕ್ತಿಯ ಬಳಿಗೆ ಉಸ್ತಾದರನ್ನು ಕರೆದುಕೊಂಡು ಹೋದರು. ಆ ವ್ಯಕ್ತಿ ಅಲ್ ಮದೀನಾದ ಬ್ರೋಶರಿನಲ್ಲಿ ಕೂರ ತಂಗಲ್ ರವರ ಫೋಟೋ ನೋಡಿ ತಮಾಷೆಯ ದಾಟಿಯಲ್ಲಿ ‘ ಇವರು ನೀರಿಗೆ ಊದುವುವವರಲ್ಲವೇ’ ಎಂದು ಹೇಳಿದನಂತೆ. ಕುಪಿತರಾದ ಶರಫುಲ್ ಉಲಾಮಾ ‘ ಏನು ಬೊಗಳುತ್ತಿಯಾ? ನಿನ್ನ ಹಣ, ಅಹಂಕಾರ ನಿನಗಾಯಿತು, ಎಚ್ಚರಿಕೆಯಿಂದ ಮಾತಾಡು, ನಿನಂತಹವರ ಹಣ ಬೇಡ’ ಎನ್ನುತ್ತ ಅವನಿಂದ ಹಣ ಸ್ವೀಕರಿಸದೆ ಎದ್ದು ಬಂದರಂತೆ.

ತಾಜುಲ್ ಉಲಾಮಾರ ಉರೂಸಿನ ಸ್ವಾಗತ ಸಮಿತಿ ರಚನೆ ಉಸ್ತಾದರ ಕಾಲದಿಂದಲೇ ವರ್ಷಂಪ್ರತಿ ಅಲ್ ಮದೀನಾದಲ್ಲೇ ನಡೆಯುವುದು. ಉಸ್ತಾದರ ವಫಾತಿನ ನಂತರ, ಜನರ ಸೌಕರ್ಯಕ್ಕಾಗಿ ಕೆಲವರು ಬೇರೆ ಹಾಲ್ ಗಳಲ್ಲಿ ಏರ್ಪಡಿಸುವ ಪ್ರಸ್ತಾಪ ಮಾಡಿದಾಗ ‘ ಅಬ್ಬಾಸ್ ಊಸ್ತಾದರೇ ಅದನ್ನು ಅಲ್ ಮದೀನಾದಲ್ಲಿ ಅದಕ್ಕೆ ವ್ಯವಸ್ಥೆ ಮಾಡುತ್ತಿದ್ದುದು. ಅದು ಅಲ್ಲೇ ಮುಂದುವರಿಯಲಿ’ ಎಂದಾಗಿತ್ತು ಸಯ್ಯಿದ್ ರವರ ಉತ್ತರ. ಇದು ಉಸ್ತಾದರ ಬಗ್ಗೆ ಸಯ್ಯಿದ್ ರವರಿಗಿದ್ದ ಅಭಿಮಾನಕ್ಕೆ ಸಾಕ್ಷಿ. ನಿನ್ನೆಯೂ ಸಯ್ಯಿದ್ ರವರ ಮರಣ ವಾರ್ತೆ ಬರುವ ಕೆಲವೇ ನಿಮಿಷ ಮೊದಲು ಕೂರತ್ ತಂಗಲ್ ರವರ ಆಪ್ತ ಖಾಲಿದ್ ಹಾಜಿ ಭಟ್ಕಳ ರವರು ಫೋನ್ ಮಾಡಿ ತಾಜುಲ್ ಉಲಾಮಾ ಉರೂಸಿನ ಸ್ವಾಗತ ಸಮಿತಿ ರಚನೆಗೆ ಸಭಾಂಗಣ ಬುಕ್ ಮಾಡಿದ್ದರು.

ಮಂಜನಾಡಿಯ ಆಸುಪಾಸಿನಲ್ಲಿ ಎಲ್ಲಾದರೂ ಕಾರ್ಯಕ್ರಮಕ್ಕೆ ಬಂದು ತುಸು ವಿಶ್ರಾಂತಿ ಪಡೆಯಲು ಬಯಸಿದರೆ ಅವರು ಬರುತ್ತಿದ್ದುದು ಅಲ್ ಮದೀನಕ್ಕೆ. ಸಮೀಪದಲ್ಲಿ ಎಷ್ಟೋ ಮನೆಯವರು ಅವರಿಗೆ ತಂಗಲು ವ್ಯವಸ್ಥೆ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಅವರಿಗೆ ಅಲ್ ಮದೀನಾಕ್ಕೆ ಬಂದು ಈಗಲೂ ಇರುವ ಶರಪುಲ್ ಉಲಮಾರ ಮಂಚ, ಹಾಸಿಗೆಯಲ್ಲಿ ತುಸು ವಿಶ್ರಮಿಸಿ, ಅವರು ಕೂರುತ್ತಿದ್ದ ಅದೇ ಚೆಯರ್ ನಲ್ಲಿ ಕೂತುಕೊಳ್ಳುವುದೇ ಇಷ್ಟವಾಗಿತ್ತು.. ಎರಡು ವಾರಕ್ಕೆ ಮುಂಚೆಯೂ ಹೀಗೆ ಬಂದು ಸುಮಾರು ಒಂದೂವರೆ ತಾಸು ವಿಶ್ರಮಿಸಿ ಹೋಗಿದ್ದರು. ಅಂದು ಸ್ಟಂಸ್ಥೆಯ ಸ್ಥಿತಿಗತಿಯ ಬಗ್ಗೆ ತುಂಬಾ ಹೊತ್ತು ಚರ್ಚಿಸಿದ್ದರು. ಹೀಗೆ ಬಂದಾಗೆಲ್ಲ ನಮಗೂ ಇಲ್ಲಿನ ಸಿಬ್ಬಂದಿಗಳಿಗೂ ಸ್ವಲ್ಪ ಫ್ರೀಯಾಗಿ ಅವರಲ್ಲಿ ಮಾತಾಡಿ ಸುಖ ಕಷ್ಟವನ್ನು ತೋಡಿಕೊಳ್ಳಲು, ಆಶೀರ್ವಾದ ಪಡೆಯಲು ಒಂದು ಅವಕಾಶವಾಗುತ್ತಿತ್ತು. ಆದರೆ ಮೊನ್ನೆಯ ಭೇಟಿ ಅವರ ಕೊನೆಯ ಭೇಟಿಯಾಗಬಹುದೆಂದು ಅನಿಸಿರಲಿಲ್ಲ.

ಅಲ್ಲಾಹು ಅವರ ಸ್ಥಾನವನ್ನು ಏರಿಸಲಿ, ಸ್ವರ್ಗದಲ್ಲೂ ಅವರೊಂದಿಗೆ ವಾಸಿಸುವ ಸೌಭಾಗ್ಯ ನಮಗೆ ದೊರೆಯಲಿ-ಅಮೀನ್

ಇಂದು ಮುಖ್ಯ ಅತಿಥಿಯಾಗಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.
05/02/2024

ಇಂದು ಮುಖ್ಯ ಅತಿಥಿಯಾಗಿ
ಶೈಖುನಾ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್.


Mutha'allim Conference
05/02/2024

Mutha'allim Conference

Ulama Conference
04/02/2024

Ulama Conference

Address

Mangalore

Opening Hours

Monday 6am - 10pm
Tuesday 6am - 10pm
Wednesday 6am - 10pm
Thursday 6am - 10pm
Friday 6am - 10pm
Saturday 6am - 10pm
Sunday 6am - 10pm

Telephone

+918147018899

Alerts

Be the first to know and let us send you an email when Al-Madeena Manjanady posts news and promotions. Your email address will not be used for any other purpose, and you can unsubscribe at any time.

Contact The University

Send a message to Al-Madeena Manjanady:

Share