06/02/2023
14 ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನವು 2022 ರ ಸೆಪ್ಟೆಂಬರ್ 8 , 9 ಹಾಗೂ 10 ನೇ ತಾರೀಖಿನಂದು "ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು" ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಾಡೋಜ ಡಾ|| ಹೆಚ್. ನರಸಿಂಹಯ್ಯ (ಸಂಸ್ಥಾಪಕ ಅಧ್ಯಕ್ಷರು, ಕ.ರಾ.ವಿ.ಪ) , ಭಾರತ ರತ್ನ ಪ್ರೊ. ಸಿ. ಎನ್.ಆರ್. ರಾವ್ (ಮಹಾಪೋಷಕರು, ಕ.ರಾ.ವಿ.ಪ) , ಸಮ್ಮೇಳನಾಧ್ಯಕ್ಷರಾಗಿ ಪದ್ಮಾಶ್ರೀ ಎ.ಎಸ್. ಕಿರಣ್ ಕುಮಾರ್ (ವಿಶ್ರಾಂತ ಅಧ್ಯಕ್ಷರು, ಇಸ್ರೋ) ರವರು ಉಪಸ್ಥಿತರಿದ್ದರು. ಈ ಸಮ್ಮೇಳನದಲ್ಲಿ ಯುವರಾಜ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪ್ರಬಂಧವನ್ನು ಮಂಡಿಸಿದರು ಹಾಗೂ ಇತರರು ಮಂಡಿಸಿದ ವಿಷಯಗಳ ಬಗ್ಗೆ ಚರ್ಚೆಯನ್ನು ನಡೆಸಿ ವಿಜ್ಞಾನದ ಅರಿವನ್ನು ಮೂಡಿಸಿಕೊಂಡರು.
#ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗ
#ಯುವರಾಜ ಕಾಲೇಜು, ಮೈಸೂರು
#ಮೈಸೂರು ವಿಶ್ವವಿದ್ಯಾಲಯ