S.J. Academy Shahapur

S.J. Academy Shahapur Learning is an Ornament in Prosperity, A Refuge in Adversity and A Provision in Old Age.

24/02/2018
In association with Pragnya Degree College Shahapur, Concept Based Lecturing on:Ratio Analysis...On Sunday 18th February...
14/02/2018

In association with Pragnya Degree College Shahapur,
Concept Based Lecturing on:
Ratio Analysis...
On Sunday 18th February 2018.
Time: 10 am TO 01pm..

ಭಾರತೀಯ ಸ್ಟೇಟ್‌ ಬ್ಯಾಂಕ್‌, ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 1 2,887 ಕೋಟಿ ನಷ್ಟ ಅನುಭವಿಸಿದೆ.2016-17ನೇ ಆರ್ಥಿಕ ವರ್ಷದ ಇದೇ ಅವಧಿಯ...
10/02/2018

ಭಾರತೀಯ ಸ್ಟೇಟ್‌ ಬ್ಯಾಂಕ್‌, ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 1 2,887 ಕೋಟಿ ನಷ್ಟ ಅನುಭವಿಸಿದೆ.

2016-17ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹ 2,152 ಕೋಟಿ ನಿವ್ವಳ ಲಾಭ ಗಳಿಸಿತ್ತು.

ವಸೂಲಿಯಾಗದ ಸಾಲದ (ಎನ್‌ಪಿಎ) ಪ್ರಮಾಣ ಗರಿಷ್ಠ ಮಟ್ಟದಲ್ಲಿ ಇರುವುದು (ಶೇ 5.61) ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿಯೂ ಭಾರಿ ಏರಿಕೆ ಕಂಡಿರುವುದರಿಂದ ನಷ್ಟ ಕಾಣುವಂತಾಗಿದೆ ಎಂದು ತಿಳಿಸಿದೆ.

10/02/2018

ಮ್ಯೂಚುವಲ್‌ ಫಂಡ್‌ಗಳತ್ತ ಸಾಮಾನ್ಯ ಹೂಡಿಕೆದಾರರ ಸೆಳೆತ ಹೆಚ್ಚುತ್ತಿರುವುದರಿಂದ ಸಂಪತ್ತು ನಿರ್ವಹಣಾ ಸಂಸ್ಥೆಗಳು ಈ ವರ್ಷ 18 ಹೊಸ ಯೋಜನೆಗಳನ್ನು ಆರಂಭಿಸಲು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅನುಮತಿ ಕೋರಿವೆ.

ಸ್ಥಿರ ಪರಿಪಕ್ವ ಯೋಜನೆ, ಷೇರುಪೇಟೆ ಹೂಡಿಕೆ ನಿಧಿ, ಷೇರು ಮತ್ತು ಸಾಲಪತ್ರಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳ ಕರಡು ದಾಖಲೆಗಳನ್ನು ‘ಸೆಬಿ’ಗೆ ಸಲ್ಲಿಸಲಾಗಿದೆ.

ಮಹೀಂದ್ರಾ, ಆ್ಯಕ್ಸಿಸ್‌, ಆದಿತ್ಯ ಬಿರ್ಲಾ ಸನ್‌ಲೈಫ್‌, ಎಚ್‌ಎಸ್‌ಬಿಸಿ, ಯುಟಿಐ, ರಿಲಯನ್ಸ್‌, ಕೋಟಕ್‌, ಟಾಟಾ, ಫ್ರಾಂಕ್ಲಿನ್‌, ಎಸ್‌ಬಿಐ, ಸುಂದರಂ ಮತ್ತು ಶ್ರೀರಾಂ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ‘ಹೊಸ ನಿಧಿ ಕೊಡುಗೆಯ (ಎನ್‌ಎಫ್‌ಒ) ದಾಖಲೆಗಳನ್ನು ಪೇಟೆಯ ನಿಯಂತ್ರಣ ಸಂಸ್ಥೆ ‘ಸೆಬಿ’ಗೆ ಸಲ್ಲಿಸಿವೆ.

ಎಸ್‌ಬಿಐ ಮ್ಯೂಚುವಲ್‌ ಫಂಡ್‌, ಮೂರು ಯೋಜನೆಗಳನ್ನು ಆರಂಭಿಸಲು ಕೋರಿಕೆ ಸಲ್ಲಿಸಿದೆ. ಇತರ ಸಂಸ್ಥೆಗಳು ತಲಾ ಒಂದೊಂದು ಹೊಸ ಯೋಜನೆ ಆರಂಭಿಸಲು ಮುಂದಾಗಿವೆ.

ಮಹೀಂದ್ರಾ ಮ್ಯೂಚುವಲ್‌ ಫಂಡ್‌, ಹಿಂದಿಯಲ್ಲಿ ‘ರೂರಲ್‌ ಭಾರತ್ ಯೋಜನಾ’ ಹೆಸರಿನ ಯೋಜನೆ ಮೂಲಕ ಗ್ರಾಮೀಣ ಭಾಗದ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿದೆ. ಹೂಡಿಕೆ ಯೋಜನೆಗಳಿಗೆ ಇಂಗ್ಲಿಷ್‌ ಹೆಸರು ಇಡುವ ಪ್ರವೃತ್ತಿಗಿಂತ ಇದು ಭಿನ್ನವಾಗಿದೆ.

ಇತ್ತೀಚಿನ ದಿನಗಳಲ್ಲಿ ರಿಟೇಲ್‌ ಹೂಡಿಕೆದಾರರಲ್ಲಿ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಹೆಚ್ಚಿನ ಒಲವು ಕಂಡು ಬರುತ್ತಿದೆ. ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಹೂಡಿಕೆಯು ಕಡಿಮೆ ವೆಚ್ಚದ ಮತ್ತು ಪಾರದರ್ಶಕ ಸ್ವರೂಪದ ವಹಿವಾಟಿನಿಂದಾಗಿ ಗಮನ ಸೆಳೆಯುತ್ತಿದೆ.

ಸಂಪತ್ತು ನಿರ್ವಹಣಾ ಸಂಸ್ಥೆಗಳು (ಎಂಎಫ್‌), ಹೂಡಿಕೆದಾರರು ತೊಡಗಿಸಿದ ಹಣವನ್ನು ಒಟ್ಟುಗೂಡಿಸಿ ಅವರ ಪರವಾಗಿ ಹೂಡಿಕೆ ಮಾಡುತ್ತವೆ. ಷೇರು ಮತ್ತು ಬಾಂಡ್‌ಗಳಲ್ಲಿ ಹಣ ತೊಡಗಿಸುತ್ತವೆ. ಇದಕ್ಕಾಗಿ ಹೂಡಿಕೆದಾರರು ಪ್ರತ್ಯೇಕವಾಗಿ ಷೇರು, ಬಾಂಡ್‌ ಮತ್ತು ಸಾಲ ಪತ್ರ ಖರೀದಿಸುವ ಅಗತ್ಯ ಇರಲಾರದು.

Address

Shahapur
585223

Website

Alerts

Be the first to know and let us send you an email when S.J. Academy Shahapur posts news and promotions. Your email address will not be used for any other purpose, and you can unsubscribe at any time.

Share